ಹತ್ತನೇ ಪಾಸಾದವರು ಕೂಡಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ! ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ!

District court jobs Recruitments 2024: ಜಿಲ್ಲಾ ನ್ಯಾಯಾಲಯ ಹುದ್ದೆಗಳ ನೇಮಕಾತಿ

ನಮಸ್ಕಾರ ಗೆಳೆಯರೇ. ನಮ್ಮ ಹೊಸ ನುಡಿ ಮಾಧ್ಯಮದ ಜಿಲ್ಲಾ ನ್ಯಾಯಾಲಯದ ಹುದ್ದೆಗಳ ನೇಮಕಾತಿಯ ಬಗ್ಗೆ ಒಂದು ಸೋವಿಸ್ತರವಾದ ಮತ್ತು ಸಂಪೂರ್ಣ ಮಾಹಿತಿಯನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ಮತ್ತು ಉದ್ಯೋಗವನ್ನು ಹುಡುಕುತ್ತಿರುವಂತಹ ಅಭ್ಯರ್ಥಿಗಳಿಗೆ ಅದರಲ್ಲೂ ಸರಕಾರಿ ಹುದ್ದೆಗಳ ಹುಡುಕಾಟದಲ್ಲಿ ಇರುವಂತಹ ಅಭ್ಯರ್ಥಿಗಳಿಗೆ ನಾವು ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೆಂದರೆ ಜಿಲ್ಲಾ ನ್ಯಾಯಾಲಯದಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ.

ಆದಕಾರಣ ನೀವು 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಕಾಂಕ್ಷೆ ನಿಮಗಿದ್ದರೆ ನೀವು ಮಾಡಬೇಕಾದ ಕಾರ್ಯ ಏನು ಎಂಬುದನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ.

ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ನೋಡಿ ಅಥವಾ ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಒಂದು ಕ್ಲಾರಿಟಿ ಸಿಗುತ್ತದೆ ಮತ್ತು ಮಾಹಿತಿ ಕೂಡ ದೊರಕುತ್ತದೆ. ಒಂದು ವೇಳೆ ನೀವು ಈ ಒಂದು ಲೇಖನವನ್ನು ಅರ್ಧದಷ್ಟು ಓದಿದರೆ ನಿಮಗೆ ಯಾವುದೇ ಮಾಹಿತಿ ದೊರಕುವುದಿಲ್ಲ.ಈ ಲೇಖನದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.

ಜಿಲ್ಲಾ ನ್ಯಾಯಾಲಯ ನೇಮಕಾತಿ

ಹೌದು ಗೆಳೆಯರೇ, ಎಸ್ ಎಲ್ ಸಿ ಪಾಸಾಗಿ ಸರ್ಕಾರಿ ಉದ್ಯೋಗಗಳ ನಿರೀಕ್ಷೆಯಲ್ಲಿರುವಂತಹ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವೆ ಯಾವುದು? ಯಾಕೆಂದರೆ ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಜಿಗಳು ಈಗಾಗಲೇ ಆರಂಭವಾಗಿವೆ. ಆದಕಾರಣ ತಾವುಗಳು ಸರಕಾರಿ ಹುದ್ದೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದರೆ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಒಟ್ಟಾರೆಯಾಗಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನಿಮಗೆ ಇಲ್ಲಿ ತಿಳಿಯುತ್ತದೆ.

ಹುದ್ದೆಗಳ ವಿವರ

ಮಂಡ್ಯ ಮತ್ತು ಸತ್ರ ಜಿಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ಮಂಡ್ಯ ಘಟಕದ ಹಲವು ನ್ಯಾಯಾಲಯಗಳಲ್ಲಿ ಒಟ್ಟು 41 ಜವಾನರ ಹುದ್ದೆಗಳ ನೇಮಕಾತಿಗೆ ಅರ್ಜಿಗಳು ಆರಂಭವಾಗಿವೆ.

ಶೈಕ್ಷಣಿಕ ಅರ್ಹತೆ

ನೀವು ಮಂಡ್ಯ ಮತ್ತು ಸತ್ರ ಜಿಲ್ಲಾ ನ್ಯಾಯಾಲಯಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಮಾನ್ಯತೆಯನ್ನು ಪಡೆದಿರುವಂತಹ ಯಾವುದೇ ಮಂಡಳಿಗಳಿಂದಾಗಲಿ ಅಥವಾ ವಿಶ್ವವಿದ್ಯಾಲಯಗಳಿಂದಾಗಲಿ 10ನೇ ತರಗತಿ ಅಂದರೆ ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದರೆ ಸಾಕು.

ವೇತನದ ಮಾಹಿತಿ

ಮಂಡ್ಯ ಜಿಲ್ಲಾ ನ್ಯಾಯಾಲಯದ ಅಧಿಸೂಚನೆ ಪ್ರಕಾರ ಜವಾನ ಹುದ್ದೆಗಳಿಗೆ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹17500/- ರಿಂದ ₹29.000/-ರ ವರೆಗೆ ತಿಂಗಳ ಮಾಸಿಕ ವೇತನವನ್ನು ನೀಡಲಾಗುವುದು

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇ 2024ಕ್ಕೆ ಕನಿಷ್ಠ 18 ವರ್ಷಗಳನ್ನು ಪೂರ್ಣಗೊಳಿಸಿದ್ದರೆ ಸಾಕು ಮತ್ತು ಗರಿಷ್ಠ ವಯಸ್ಸನ್ನು ವರ್ಗಗಳ ಅನ್ವಯ ನೀಡಲಾಗಿದೆ

  • ಎಸ್ ಸಿ ಎಸ್ ಟಿ ಪ್ರವರ್ಗ ಒಂದು 40 ವರ್ಷ
  • ಸಾಮಾನ್ಯ ವರ್ಗ 35 ವರ್ಷ
  • ಪ್ರವರ್ಗ 2A,2B,3A,3B, 38 ವರ್ಷ

ಅರ್ಜಿ ಶುಲ್ಕ

  • ಎಸ್ ಟಿ ಎಸ್ ಸಿ ಮತ್ತು ಪ್ರವರ್ಗ 1 ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
  • ಸಾಮಾನ್ಯ ವರ್ಗ ₹300/-
  • ಪ್ರವರ್ಗ 2A,2B,3A,3B ₹150/-

ಪ್ರಮುಖ ದಿನಾಂಕಗಳು

  • ಈ ಹುದ್ದೆಗಳಿಗೆ ಅರ್ಜಿಗಳು 03/05/2024 ಆರಂಭವಾಗಿವೆ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03/06/2024 ಆಗಿದೆ

ಅರ್ಜಿ ಸಲ್ಲಿಸುವ ವಿಧಾನ

ಮಂಡ್ಯ ಜಿಲ್ಲೆ ಮತ್ತು ಸತ್ರ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಂಡ್ಯ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು ಇಲ್ಲವಾದರೆ ನಾವು ಕೆಳಗೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಂಡ್ಯ ಜಿಲ್ಲಾ ನ್ಯಾಯಾಲಯ ಅಧಿಕೃತ ವೆಬ್ಸೈಟ್ ಲಿಂಕ್

https://mandya.dcourts.gov.in/online-recruitment/

ಮಂಡ್ಯ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ

                       ಡೌನ್ಲೋಡ್

ಇದನ್ನು ಓದಿ

ಇದೇ ತರದ ಸರಕಾರ ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವು ನಮ್ಮ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಮ್ಮ ಮಾಧ್ಯಮದ ಚಂದದಾರರಾಗಿ ಮತ್ತು ಈ ಒಂದು ಮಾಧ್ಯಮದ ನೋಟಿಫಿಕೇಶನ್ ಬಟನ್ ಏನಿದೆ ಅದನ್ನು ಆನ್ ಮಾಡಿಕೊಳ್ಳಿ. ಧನ್ಯವಾದಗಳು ಸಿಗೋಣ ಮುಂದಿನ ಹೊಚ್ಚ ಹೊಸ ಲೇಖನದಲ್ಲಿ.

Leave a Reply

Your email address will not be published. Required fields are marked *