ರೇಷನ್ ಕಾರ್ಡ್ ತಿದ್ದುಪಡಿ ಆರಂಭ? ಏನೇನು ತಿದ್ದುಪಡಿ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

Ration Card Correction-ರೇಷನ್ ಕಾರ್ಡ್ ತಿದ್ದುಪಡಿ

ಸ್ನೇಹಿತರೆ ಈ ಮೊದಲೇ ರೇಷನ್ ಕಾರ್ಡಿಗೆ ಹೆಸರು ಸೇರ್ಪಡೆ. ಮರಣ ಹೊಂದಿದವರ ಸದಸ್ಯರನ್ನು ಡಿಲೀಟ್ ಮಾಡಲು. ರೇಷನ್ ಕಾರ್ಡ್ ವಿಳಾಸ ತಿದ್ದುಪಡಿ ಮಾಡಲು ರಾಜ್ಯ ಆಹಾರ ಇಲಾಖೆ ಅವಕಾಶ ನೀಡಿದ್ದು ಆದರೆ ಸರ್ವ ಸಮಸ್ಯೆಯಿಂದ ಇನ್ನೂ ಹಲವಾರು ಜನರ ರೇಷನ್ ಕಾರ್ಡ್ ತಿದ್ದುಪಡಿ ಹಾಗೆ ಉಳಿದಿವೆ

ಆಹಾರ ಇಲಾಖೆ ಸೂಚಿಸಿದ ಪ್ರಕಾರ ನಾವು ರೇಷನ್ ಕಾರ್ಡ್ ನಲ್ಲಿ ಏನೇನು ತಿದ್ದುಪಡಿ ಮಾಡಬಹುದು ಮತ್ತು ಯಾವಾಗ ಮಾಡಬಹುದು ಎಂದು ಹೇಳುತ್ತೇವೆ ಆದ್ದರಿಂದ ಈ ಆರ್ಟಿಕಲನ್ನು ಕೊನೆವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ರೇಷನ್ ಕಾರ್ಡ್ ತಿದ್ದುಪಡಿ ತಿಂಗಳಲ್ಲಿ ಒಂದು ಬಾರಿ ಬಿಡುವ ಸಾಧ್ಯತೆಯಿದ್ದು ನೀವು ಸರ್ವರ್ ಬಂದಾಗುವ ಮೊದಲು ಹೋಗಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಿ

ರಾಜ್ಯ ಆಹಾರ ಇಲಾಖೆ ಸೂಚಿಸಿರುವ ಪ್ರಕಾರ ರೇಷನ್ ಕಾರ್ಡ್ ನಲ್ಲಿ ಏನೇನು ತಿದ್ದುಪಡಿ ಮಾಡಬಹುದೆಂದರೆ

  • ರೇಷನ್ ಕಾರ್ಡಿಗೆ ಕುಟುಂಬದ ಹೊಸ ಸದಸ್ಯರನ್ನು ಸೇರಿಸಬಹುದು
  • ರೇಷನ್ ಕಾರ್ಡ್ ನ ವಿಳಾಸ ತಪ್ಪಿದ್ದರೆ ಅದನ್ನು ತಿದ್ದುಪಡಿ ಮಾಡಬಹುದು
  • ಮರಣ ಹೊಂದಿದವರ ಹೆಸರನ್ನು ತೆಗೆದುಹಾಕಲು ಅವಕಾಶವಿದೆ

ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳೆಂದರೆ

ರೇಷನ್ ಕಾರ್ಡ್ ಗೆ ಕುಟುಂಬದ ಹೊಸ ಸದಸ್ಯರನ್ನು ಸೇರಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಆದಾಯ ಮತ್ತು ಜಾತಿ ಪ್ರಮಾಣ ಪತ್ರ
  • ಈಗಾಗಲೇ ಇರುವ ರೇಷನ್ ಕಾರ್ಡ್

ರೇಷನ್ ಕಾರ್ಡ್ ವಿಳಾಸ ತಿದ್ದುಪಡಿಗೆ ಬೇಕಾಗುವ ದಾಖಲೆಗಳು

  • ಇತ್ತೀಚೆಗೆ ವಾಸವಿರುವ ವಿಳಾಸದ ಪುರಾವೆ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್

ಮರಣ ಹೊಂದಿದವರ ಹೆಸರನ್ನು ಡಿಲೀಟ್ ಮಾಡಲು ಬೇಕಾಗುವ ದಾಖಲೆಗಳು

  • ಮರಣ ಹೊಂದಿದವರ ಮರಣ ಪ್ರಮಾಣ ಪತ್ರ

ಮತ್ತು ನಾವು ರೇಷನ್ ಕಾರ್ಡ್ ತಿದ್ದುಪಡಿಯ ದಿನಾಂಕದ ಕಡೆಗೆ ಬರುವುದಾದರೆ ರಾಜ್ಯ ಆಹಾರ ಇಲಾಖೆಯು ಇಲ್ಲಿಯವರೆಗೆ ಯಾವುದೇ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ ಆದರೆ ಇದೇ ತಿಂಗಳಲ್ಲಿ ಅಂದರೆ ಜನವರಿ ತಿಂಗಳಲ್ಲಿ ಬಿಡುವ ಸಾಧ್ಯತೆ ತುಂಬಾನೇ ಇದೆ

ಹೆಚ್ಚಿನ ಮಾಹಿತಿಗಾಗಿ ರಾಜ್ಯ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅದರ ಲಿಂಕ್ ಕೆಳಗಡೆ ನೀಡಿದ್ದೇವೆ

https://ahara.kar.nic.in/Home/EServices

ಇನ್ನಷ್ಟು ಮಾಹಿತಿ

ನೀವು ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬೇಕೆಂದರೆ

ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಹೋಗಿ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದಾಗಿದೆ