ssp scholarship update-ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ
ಸ್ನೇಹಿತರೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶವು(ssp scholarship) ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಹಣ ಸಹಾಯ ಮಾಡುವುದರ ಮೂಲಕ ರಾಜ್ಯದ ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಿದೆ.
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವು ಈ ಮೊದಲೇ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಿದ್ದು ಇನ್ನೂ ಹಲವಾರು ಜನರು ಅರ್ಜಿ ಹಾಕದೆ ಇರುವ ಕಾರಣ ಕೊನೆಯ ದಿನಾಂಕವನ್ನು ಒಂದಷ್ಟು ದಿನ ವಿಸ್ತರಣೆ ಮಾಡಿದೆ.
ಅರ್ಜಿ ಸಲ್ಲಿಸಲು ಯಾವುದು ಕೊನೆಯ ದಿನಾಂಕ ಮತ್ತು ಈಗಾಗಲೇ ಅರ್ಜಿ ಹಾಕಿದವರ ಸ್ಥಿತಿಯನ್ನು ಪರಿಶೀಲಿಸಲು ಏನು ಮಾಡಬೇಕೆಂದು ಮತ್ತು ಈ ಅರ್ಜಿಹಾಕಲು ಅರ್ಹರು ಯಾರು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಆದ್ದರಿಂದ ಈ ಆರ್ಟಿಕಲನ್ನು ಕೊನೆವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
ಕರ್ನಾಟಕ ಸರ್ಕಾರವು ಎಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ವಿದ್ಯಾರ್ಥಿ ವೇತನ (ssp scholarship) ಕಾರ್ಯಕ್ರಮವನ್ನು ಪರಿಚಯಿಸಿದೆ. ರಾಜ್ಯದ ST/SC ಹಾಗೂ OBC ಜಾತಿ ವೇಳಾಪಟ್ಟಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳಿಗೆ ತಲ ಇಂತಿಷ್ಟು ಎಂದು ಧನಸಹಾಯ ಮಾಡುತ್ತಿದೆ. ವಿದ್ಯಾರ್ಥಿ ವೇತನದ ಅರ್ಜಿಗಳನ್ನು ನವೆಂಬರ್ 30,2023 ರಂದು ಬಂದ್ ಮಾಡಲಾಗಿತ್ತು ಆದರೆ ಇನ್ನು ಹಲವಾರು ವಿದ್ಯಾರ್ಥಿಗಳು ಅರ್ಜಿ ಹಾಕದೆ ಇರುವ ಕಾರಣ ಅರ್ಜಿ ದಿನಾಂಕವನ್ನು ವಿಸ್ತರಣೆ ಮಾಡಿದೆ ಅರ್ಜಿ ಹಾಕಲು ಕೊನೆಯ ದಿನಾಂಕ ಜನವರಿ 15,2024 ರವರೆಗೆ ಮುಂದೂಡಲಾಗಿದೆ
ಅರ್ಜಿ ಸಲ್ಲಿಸು ಬೇಕಾಗುವ ವಿದ್ಯಾರ್ಥಿಯ ದಾಖಲೆಗಳು
- ಆಧಾರ್ ಕಾರ್ಡ್
- ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್
- ಪೋಷಕ ಆಧಾರ್ ಕಾರ್ಡ್
- ಇತ್ತೀಚಿಗೆ ಪಾಸಾದ ತರಗತಿಯ ಮಾರ್ಕ್ಸ್ ಕಾರ್ಡ್
ನೀವು ಇನ್ನು ಅರ್ಜಿ ಹಾಕದೆ ಇದ್ದರೆ ಈ ಕೆಳಗೆ ಕೊಟ್ಟಿರುವ ಲಿಂಕ್ ನ ಮೂಲಕ ಅರ್ಜಿಯನ್ನು ಹಾಕಬಹುದು
https://ssp.postmatric.karnataka.gov.in/
ಈಗಾಗಲೇ ಅರ್ಜಿ ಸಲ್ಲಿಸಿದವರ ಹಣ ಇದೇ ಜನವರಿ ತಿಂಗಳಲ್ಲಿ ಜಮೆ ಆಗಬಹುದೆಂದು ಕರ್ನಾಟಕ ಸರ್ಕಾರ ತಿಳಿಸಿದೆ