ನಿಮ್ಮ ಮೊಬೈಲ್ ಮೂಲಕ ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Anna bhagya scheme money status: ಅನ್ನ ಭಾಗ್ಯ ಯೋಜನೆಯ ಹಣ ಚೆಕ್ ಮಾಡಿಕೊಳ್ಳುವುದು

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಇನ್ನೊಂದು ಹೊಸ ಲೇಖನಕ್ಕೆ ನಾಡಿನ ಸಮಸ್ತ ಜನತೆಗೆ ಸ್ವಾಗತ ಸುಸ್ವಾಗತ, ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ಅಥವಾ ಜನರಿಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಕಾಂಗ್ರೆಸಿನ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಹಣ ರಾಜ್ಯದ ಎಲ್ಲಾ ಪಡಿತರ ಚೀಟಿಯನ್ನು ಹೊಂದಿದ ಕುಟುಂಬಗಳಿಗೆ ಜಮಾ ಆಗಿದ್ದು ನಿಮಗೂ ಕೂಡ ಜಮಾ ಆಗಿದೆಯಾ ಅಥವಾ ಇಲ್ಲವ ಎಂದು ನೋಡಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಇವತ್ತಿನ ಈ ಲೇಖನವಾಗಿದೆ.

ಸ್ನೇಹಿತರೆ ನಾವು ನಮ್ಮ ಈ ಒಂದು ಕನ್ನಡದ ಮಾಧ್ಯಮದಲ್ಲಿ ದಿನನಿತ್ಯವೂ ರಾಜ್ಯದಲ್ಲಿ ದೇಶದಲ್ಲಿ ನಡೆಯುವಂತಹ ಘಟನೆಗಳು, ಸರಕಾರ ಬಿಡುಗಡೆ ಮಾಡುವಂತಹ ಹೊಸ ಹುದ್ದೆಗಳ ವಿವರ ಆ ಹುದ್ದೆಗಳಿಗೆ ನೀವು ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅಷ್ಟೇ ಅಲ್ಲ ಖಾಸಗಿ ಕಂಪನಿಗಳು ಬಿಡುಗಡೆ ಮಾಡುವಂತಹ ಹುದ್ದೆಗಳು ಯಾವ್ಯಾವು ಆ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಏನು ಮಾಡಬೇಕು? ಎಂಬುದರ ಬಗ್ಗೆ ಮಾಹಿತಿಯನ್ನು ನಾವು ಪ್ರತಿನಿತ ವಿಲ್ಲಿ ಕನ್ನಡದಲ್ಲಿ ಲೇಖನವನ್ನು ಬರೆಯುತ್ತಲೇ ಇರುತ್ತೇವೆ.

ಅನ್ನಭಾಗ್ಯ ಯೋಜನೆ 2024

ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು ಆ ಗ್ಯಾರೆಂಟಿಗಳಲ್ಲಿ ಒಂದು ಪ್ರಮುಖವಾದ ಯೋಜನೆ ಎಂದರೆ ಅದು ಅನ್ನಭಾಗ್ಯ ಯೋಜನೆ. ಈ ಯೋಜನೆ ಅಡಿಯಲ್ಲಿ 5 ಕೆಜಿಯ ಅಕ್ಕಿಯನ್ನು ಪ್ರತಿಯೊಬ್ಬ ಸದಸ್ಯರಿಗೆ ಪ್ರತಿ ತಿಂಗಳು ಕಾಂಗ್ರೆಸ್ ಸರ್ಕಾರ ನೀಡುತ್ತಾ ಬಂದಿದೆ. ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ನೇರವಾಗಿ ನೀಡಿದೆ ಸರಕಾರ. ಈ ತಿಂಗಳಿನ ಅನ್ನ ಭಾಗ್ಯ ಯೋಜನೆ ಅಂದರೆ ಮಾರ್ಚ್ 2024 ತಿಂಗಳಿನ ಹಣ ಇದೆ ಮಾರ್ಚ್ 10 2024 ರಂದು ಜಮಾ ಆಗಿದ್ದು. ಇನ್ನೂ ಯಾರು ಈ ಹಣವನ್ನು ಚೆಕ್ ಮಾಡಿಲ್ಲವೋ ಬೇಗನೆ ಚೆಕ್ ಮಾಡಿಕೊಳ್ಳಿ ಚೆಕ್ ಮಾಡಿಕೊಳ್ಳುವ ವಿಧಾನ ಕೆಳಗೆ ನೀಡಿದ್ದೇವೆ ನೋಡಿ.

ಅನ್ನಭಾಗ್ಯ ಯೋಜನೆಯ ಹಣವನ್ನು ಮೊಬೈಲ್ ಮೂಲಕ ಚೆಕ್ ಮಾಡುವುದು ಹೇಗೆ?

ಗೆಳೆಯರೇ, ನೀವು ನಿಮ್ಮ ಅನ್ನ ಭಾಗ್ಯ ಯೋಜನೆ ಹಣವನ್ನು ಮೊಬೈಲನ್ನು ಬಳಸಿಕೊಂಡು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆಂದರೆ?

  • ಮೊದಲು ನಿಮ್ಮ ಮೊಬೈಲಿನ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಳ್ಳಿ.
  • ನಂತರದಲ್ಲಿ ಅಲ್ಲಿ ಸರ್ಚ್ ಬಾಕ್ಸಿನಲ್ಲಿ ‘ಡಿಬಿಟಿ ಕರ್ನಾಟಕ’ಎಂದು ಇಂಗ್ಲೀಷ್ ನಲ್ಲಿ ಸರ್ಚ್ ಮಾಡಿಕೊಳ್ಳಿ.
  • ನೀವು ಸರ್ಚ್ ಮಾಡಿದ ನಂತರ ನೀವು ಸರ್ಚ್ ಮಾಡಿದಂತಹ ಆಪ್ ಅಲ್ಲಿ ಬರುತ್ತದೆ,
  • ಆ ಒಂದು ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಇನ್ಸ್ಟಾಲ್ ಮಾಡಿದ ಮೇಲೆ ಅಲ್ಲಿ ಕುಟುಂಬದ ಮುಖ್ಯಸ್ಥೆಯ ಆಧಾರ್ ಸಂಖ್ಯೆ ಹಾಗೂ ಆಧಾರ್ ಕಾರ್ಡಿನೊಂದಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ಹಾಕಿ.
  • ನಂತರ ಮುಖ್ಯಸ್ಥರ ಆಧಾರ್ ಕಾರ್ಡ್ ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಗೆ ಆರು ಅಂಕಿಯ ಒಂದು ಓಟಿಪಿ ಬರುತ್ತದೆ.
  • ನೀವು ಆ ಒಂದು ಓಟಿಪಿಯನ್ನು ಹಾಕಿ ಇನ್ಸ್ಟಾಲ್ ಮಾಡಿರುವ ಅಪ್ಲಿಕೇಶನ್ ನಲ್ಲಿ ಲಾಗಿನ್ ಆಗಿ.
  • ಲಾಗಿನ್ ಆದಮೇಲೆ ನೀವು ನಿಮ್ಮ ಅನ್ನ ಭಾಗ್ಯ ಯೋಜನೆ ಹಣ ಮತ್ತು ಅದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ ಚೆಕ್ ಮಾಡಿಕೊಳ್ಳಬಹುದು.

ಇನ್ನಷ್ಟು ಓದಿ

ಗೆಳೆಯರೇ ನಿಮಗೆ ಏನಾದರೂ ಈ ಮಾಹಿತಿ ಇಷ್ಟವಾಗಿದ್ದರೆ ಈ ಒಂದು ಲೇಖನವನ್ನು ನಿಮ್ಮ ಸಂಬಂಧಿಕರು ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ನೀವು ಹೀಗೆ ಮಾಡುವುದರಿಂದ ನಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಲೇಖನವನ್ನು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಹಾಗೆ ಇದೇ ತರದ ಹೊಸ ಹೊಸ ಸುದ್ದಿಗಳನ್ನು ಎಲ್ಲರಿಗಿಂತ ಮುಂಚೆ ತಿಳಿಯಲು ನಮ್ಮ ಈ ಮಾಧ್ಯಮದ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.

Leave a Reply

Your email address will not be published. Required fields are marked *