ನಿಮ್ಮ ಹೊಲದ ಪಹಣಿಯೊಂದಿಗೆ ನಿಮ್ಮ ಒಂದು ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯ. ಇಲ್ಲವಾದರೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳು ಸಿಗುವುದಿಲ್ಲ!

Link adhar Card to rtc pahani:  ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಕೇಂದ್ರ ಸರ್ಕಾರವು ಇದೀಗ ಒಂದು ಹೊಸ ನಿಯಮವನ್ನು ಜಾರಿಗೆ ಮಾಡಿದೆ ಆ ನಿಯಮದ ಅನುಸಾರ ಒಂದು ಎಕರಗಿಂತ ಹೆಚ್ಚು ಹಾಗೂ ಒಂದು ಎಕರೆ ಹೊಲವನ್ನು ಹೊಂದಿದಂತಹ ದೇಶದ ಎಲ್ಲಾ ರೈತರು ಹೊಲ ಯಾರ ಹೆಸರಿನಲ್ಲಿ ಇದೆಯೋ ಅವರ ಆಧಾರ್ ಕಾರ್ಡ್ ನೊಂದಿಗೆ ಹೊಲದ ಪಾಣಿಯನ್ನು ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಇದೇ ತರದ ಹೊಸ ಹೊಸ ಸುದ್ದಿಗಳನ್ನು ಹೊಂದಿದ ಹಾಗೂ ಹೊಸ ಹೊಸ ವಿಚಾರಗಳನ್ನು ಹೊಂದಿದ ಲೇಖನವನ್ನು ನಾವಿಲ್ಲಿ ಪ್ರತಿನಿತ್ಯವೂ ಪೋಸ್ಟ್ ಮಾಡುತ್ತಲೇ ಇರುತ್ತೇವೆ, ಅಷ್ಟೇ ಅಲ್ಲ ಉದ್ಯೋಗ ಹುಡುಕುತ್ತಿರುವಂತಹ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಬಿಡುಗಡೆ ಮಾಡುವಂತಹ ಹುದ್ದೆಗಳ ವಿವರ, ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಆಯ್ಕೆ ವಿಧಾನ ಯಾವ ರೀತಿಯಲ್ಲಿ ಇರುತ್ತದೆ, ಅಷ್ಟೇ ಅಲ್ಲ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಆರ್ಥಿಕ ನೆರವು ನೀಡುವ ಸ್ಕಾಲರ್ಶಿಪ್ ಗಳ ಬಗ್ಗೆ ಸಹ ನಾವಿಲ್ಲಿ ಮಾಹಿತಿಯನ್ನು ನಿಮಗೆ ನೀಡುತ್ತಲೇ ಇರುತ್ತೇವೆ.

ಕಂದಾಯ ಇಲಾಖೆಯ ಮಾಹಿತಿ

ರಾಜ್ಯದಲ್ಲಿ ವಾಸ ಮಾಡುವಂತಹ ಎಲ್ಲ ರೈತರ ಹೊಲದ ಪಾಣಿಯೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯ ಒಂದು ವೇಳೆ ಹೀಗೆ ಮಾಡದಿದ್ದರೆ ಸರಕಾರದ ಯಾವುದೇ ರೈತರ ಯೋಜನೆಗಳು ಪಹಣಿಯೊಂದಿಗೆ ಆಧಾರ್ ಕಾರ್ಡನ್ನು ಜೋಡಣೆ ಮಾಡದೆ ಇರುವವರಿಗೆ ಸಿಗುವುದಿಲ್ಲ. ಇಲ್ಲಿಯವರೆಗೂ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿ ಗ್ರಾಮ ಲೆಕ್ಕಿಗರು ಅಧಿಕಾರಿಗಳು ಸುಮಾರು 90 ಸಾವಿರದವರೆಗೆ ರೈತರ ಮನೆ ಮನೆಗೆ ತೆರಳಿ ಆಧಾರ್ ಕಾರ್ಡ್ ನೊಂದಿಗೆ ಹೊಲದ ಪಾಣಿಯನ್ನು ಲಿಂಕ್ ಮಾಡಿದ್ದಾರೆ.

ಆಧಾರ್ ಕಾರ್ಡ್ ನನಗೆ ಪಹಣಿ ಲಿಂಕ್ ಮಾಡುವ ಪ್ರಯೋಜನಗಳು?

  • ಆಧಾರ್ ಕಾರ್ಡ್ ನೊಂದಿಗೆ ಪಹಣಿ ಜೋಡಣೆ ಮಾಡುವುದರಿಂದ ರಾಜ್ಯದ ಎಲ್ಲಾ ರೈತರಿಗೆ ಹಲವಾರು ಪ್ರಯೋಜನಗಳಿವೆ ಹಾಗೂ ಹೊಲ ತಮ್ಮ ಹೆಸರಿನಲ್ಲಿ ಇದೆ ಎಂದು ಕಾತರಿ ಪಡಿಸಲಾಗುತ್ತದೆ
  • ಆಧಾರ್ ಕಾರ್ಡ್ ನೊಂದಿಗೆ ಪಹಣಿ ಜೋಡಣೆ ಮಾಡುವುದರಿಂದ ಭೂ ಅಕ್ರಮ ಮತ್ತು ಭೂಮಿ ಮೋಸಗಳು ನಿಲ್ಲುತ್ತವೆ
  • ಆಧಾರ್ ಕಾರ್ಡ್ ನೊಂದಿಗೆ ಪಹಣಿಯನ್ನು ಜೋಡಣೆ ಮಾಡಿದರೆ ಮಾತ್ರ ರೈತರ ಯೋಜನೆಗಳಾದ ಬರ ಪರಿಹಾರ ಧನ ಬರುತ್ತದೆ

ಹೊಲದ ಪಾಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನಗಳು

ನೀವು ಹೊಲದ ಪಾಣಿಯೊಂದಿಗೆ ಆಧಾರ್ ಕಾರ್ಡನ್ನು ಎರಡು ಹಂತಗಳಲ್ಲಿ ಲಿಂಕ್ ಮಾಡಬಹುದಾಗಿದೆ ಅದು ಹೇಗೆಂದರೆ?

  • ಹಂತ 1-ನೀವು ನಿಮ್ಮ ಗ್ರಾಮದ ಗ್ರಾಮ ಲೆಕ್ಕೀಗ ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಗೆ ಆಧಾರ್ ಕಾರ್ಡ್ ಮತ್ತು ಪಹಣಿಯನ್ನು ನೀಡಿ ನೀವು ಪಹಣಿಯೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಬಹುದಾಗಿದೆ.
  • ಹಂತ 2 –ಒಂದು ವೇಳೆ ನಿಮಗೆ ಒಂದನೇ ಹಂತದಲ್ಲಿ ಪಹಣಿಯೊಂದಿಗೆ ಆಧಾರ್ ಕಾರ್ಡನ್ನು ಜೋಡಣೆ ಮಾಡುವುದ ಕಷ್ಟವಾದರೆ ನೀವು ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಒಂದು ಹೊಲದ ಪಾಣಿಯೊಂದಿಗೆ ಆಧಾರ್ ಕಾರ್ಡನ್ನು ಜೋಡಣೆ ಮಾಡಬಹುದಾಗಿದೆ.
  • ಅದು ಹೇಗಂದರೆ ಕೆಳಗೆ ನೀಡಿದ್ದೇವೆ ನೋಡಿ

ಮೊಬೈಲ್ ಮೂಲಕ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ಮಾಡುವ ವಿಧಾನ

ನಿಮ್ಮ ಮೊಬೈಲ್ ಮೂಲಕವೇ ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನೀವು ಈ ಒಂದು ಪಹಣಿಯೊಂದಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಬಹುದಾಗಿದೆ.

  • ಮೊದಲು ನೀವು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
  • ನಂತರ ಅಲ್ಲಿ ಲಾಗಿನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಮೊಬೈಲ್ ನಂಬರ್ ಹಾಗೂ ಆಧಾರ್ ಸಂಖ್ಯೆಯನ್ನು ಹಾಕಬೇಕಾಗುತ್ತದೆ.
  • ನಂತರ ನಿಮ್ಮ ಮೊಬೈಲ್ ನಂಬರ್ ಗೆ ಬರುವಂತಹ ಆರು ಅಂಕಿಯ ಒಟಿಪಿಯನ್ನು ಓಟಿಪಿ ಕೇಳಿದ ಜಾಗದಲ್ಲಿ ಹಾಕಿ.
  • ನಂತರ ನೀವು ಆಧಾರ್ ಕಾರ್ಡ್ ನೊಂದಿಗೆ ಪಹಣಿಯನ್ನು ಲಿಂಕ್ ಮಾಡಲು ಅಲ್ಲಿ ಒಂದು ಆಪ್ಷನ್ ನೀಡಿರುತ್ತಾರೆ.
  • ಒಪ್ಶನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡಿನಲ್ಲಿ ಇರುವ ಹಾಗೆ ನಿಮ್ಮ ಹೆಸರನ್ನು ಟೈಪ್ ಮಾಡಿ ವೆರಿಫೈ ಮೇಲೆ ಕ್ಲಿಕ್ ಮಾಡಿದರೆ ಸಾಕು
  • ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪಾಣಿ ಲಿಂಕ್ ಆಗುತ್ತದೆ

ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ಗೆ ಪಾನೀಯನು ಲಿಂಕ್ ಮಾಡಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://landrecords.karnataka.gov.in/service4/

ಗೆಳೆಯರೇ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಪಹಣಿ ಯೊಂದಿಗೆ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಲಿಂಕ್ ಮಾಡಬಹುದಾಗಿದೆ.

ಇದನ್ನು ಸಹ ಓದಿ

ಇದೇ ತರದ ಹೊಸ ಹೊಸ ವಿಚಾರಗಳನ್ನು ತಿಳಿಯಲು ನಮ್ಮ ಈ ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಸೈಟಿನ ವಾಟ್ಸಾಪ್ ಗ್ರೂಪ್ ಗಳಲ್ಲಿ ಸಹ ಜಾಯಿನ್ ಆಗಿ ನೀವು ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ  ವಾಟ್ಸಾಪ್ ಮೂಲಕ ಬಂದು ತಲುಪುತ್ತದೆ

Leave a Reply

Your email address will not be published. Required fields are marked *