10th ಪಾಸದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿಗಳು ಆರಂಭ! ಯಾವ ರೀತಿ ಸಲ್ಲಿಸುವುದು? ಇಲ್ಲಿಗೆ ಸಂಪೂರ್ಣ ಮಾಹಿತಿ!

District court bank jobs Recruitments: ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿಗಳು

ಸ್ನೇಹಿತರೆ ರಾಜ್ಯದ ಎಲ್ಲಾ ಜನರಿಗೆ ತಿಳಿಸುವುದೇನೆಂದರೆ ಈ ಲೇಖನದ ಮೂಲಕ ಜಿಲ್ಲಾ ನ್ಯಾಯಾಲಯದಲ್ಲಿ ಈಗಾಗಲೇ ಹಲವಾರು ಜನರು ಕೆಲಸ ಮಾಡುತ್ತಿದ್ದು ಇನ್ನೂ ಖಾಲಿ ಇರುವ ಕೆಲಸಗಳಿಗೆ ಜನರ ಅವಶ್ಯಕತೆ ಇದೆ ಆದ್ದರಿಂದ ಅವಶ್ಯಕತ ಇದ್ದಂತಹ ವ್ಯಕ್ತಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಜಿಲ್ಲಾ ನ್ಯಾಯಾಲಯದಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಜಿಲ್ಲಾ ನ್ಯಾಯಾಲಯವು ಆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆರಂಭ ಮಾಡಿದೆ ಆದಕಾರಣ ಆಸಕ್ತಿ ಇದ್ದಂತಹ ಅಭ್ಯರ್ಥಿಯು ಆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಏನು ಮಾಡಬೇಕು? ಅರ್ಜಿ ಸಲ್ಲಿಸುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ

ಹೌದು ಸ್ನೇಹಿತರೆ ಜಿಲ್ಲಾ ನ್ಯಾಯಾಲಯವು ಹಲವಾರು ಹುದ್ದೆಗಳ ಅರ್ಜಿಗಳನ್ನು ಬಿಡುಗಡೆ ಮಾಡಿದ್ದು ಜಿಲ್ಲಾ ನ್ಯಾಯಾಲಯವು ಬಿಡುಗಡೆ ಮಾಡಿದ ಹುದ್ದೆಗಳು ಯಾವ್ಯಾವು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆಗಳೇನು ವಯೋಮಿತಿಯೇನು? ಮತ್ತು ಸಂಬಳದ ವಿವರ ಖಾಲಿ ಇರುವ ಸ್ಥಳಗಳು ಯಾವ್ಯಾವು? ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ

ಜಿಲ್ಲಾ ನ್ಯಾಯಾಲಯವು ಬಿಡುಗಡೆ ಮಾಡಿದ ಹುದ್ದೆಗಳೆಂದರೆ?

  • ಜವಾನ
  • ಬೆರಳಚ್ಚುಗಾರ
  • ಸ್ಟೆನೋಗ್ರಾಫರ್ (stenographer)

ಜಿಲ್ಲಾ ನ್ಯಾಯಾಲಯ ಬಿಡುಗಡೆ ಮಾಡಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆಗಳೇನು?

  • ಜಿಲ್ಲಾ ನ್ಯಾಯಾಲಯವು ಅಧಿಸೂಚನೆಯಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಇಲ್ಲವೇ ಮಂಡಳಿಗಳಿಂದ ಹತ್ತನೇ (10th) ಮತ್ತು ಪಿಯುಸಿ(PUC) ಹಾಗೂ  ಡಿಪ್ಲೋಮೋ (DIPLOMA)  ಮಾಡಿರಬೇಕು ಎಂದು ಜಿಲ್ಲಾ ನ್ಯಾಯಾಲಯವು ಅಧಿಸೂಚಿಸಿದೆ
  • ಜವಾನ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು
  • ಬೆರಳಚ್ಚುಗಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 12ನೇ ತರಗತಿ ಪಾಸ್ ಆಗಿದ್ದರೆ ಸಾಕು
  • ಸ್ಟೆನೋಗ್ರಾಫರ್ (stenographer) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 12ನೇ ತರಗತಿ ಪಾಸ್ ಇದ್ದರೆ ಸಾಕು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಕನಿಷ್ಠ ವಯೋಮಿತಿ!

ಜಿಲ್ಲಾ ನ್ಯಾಯಾಲಯವು ಸೂಚಿಸಿದ ಆದಿ ಸೂಚನೆಯಂತೆ ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 2024 ಜನವರಿ ತಿಂಗಳಿಗೆ 18 ರಿಂದ 35 ವರ್ಷದ ಒಳಗಿನ ಯಾವುದೇ ವ್ಯಕ್ತಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಖಾಲಿ ಇರುವ ಹುದ್ದೆಗಳ ಸಂಬಳದ ವಿವರ ಈ ಕೆಳಗಿನಂತಿದೆ

  • ಜವಾನ ಈ ಕೆಲಸಕ್ಕೆ ಆಯ್ಕೆಯಾದ ಅಭ್ಯರ್ಥಿಗೆ ಸುಮಾರು 18000 ರೂಪಾಯಿಗಳಿಂದ 30,000 ಗಳವರೆಗೆ ತಿಂಗಳ ವೇತನವನ್ನು ಕೊಡಲಾಗುವುದು
  • ಬೆರಳಚ್ಚುಗಾರ ಈ ಕೆಲಸಕ್ಕೆ ಆಯ್ಕೆಯಾದ ಅಭ್ಯರ್ಥಿಗೆ ಸುಮಾರು 22000 ದಿಂದ 35 ಸಾವಿರದವರೆಗೆ ತಿಂಗಳ ವೇತನವನ್ನು ಕೊಡಲಾಗುವುದು
  • ಸ್ಟೆನೋಗ್ರಾಫರ್ (stenographer) ಈ ಕೆಲಸಕ್ಕೆ ಆಯ್ಕೆಯಾದ ಅಭ್ಯರ್ಥಿಗೆ 28 ಸಾವಿರದಿಂದ 53 ಸಾವಿರದವರೆಗೆ ತಿಂಗಳ ವೇತನವನ್ನು ಕೊಡಲಾಗುವುದು

ಈ ಹುದ್ದೆಗಳು ಖಾಲಿ ಇರುವ ಸ್ಥಳವೆಂದರೆ?

ಉತ್ತರ ಕರ್ನಾಟಕದ(North Karnatak) ಯಾದಗಿರಿ ಜಿಲ್ಲೆಯಲ್ಲಿ ಈ ಹುದ್ದೆಗಳಿಗೆ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ

ಅರ್ಜಿ ಸಲ್ಲಿಸುವ ವಿಧಾನ

ಯಾದಗಿರಿ ಜಿಲ್ಲಾ ನ್ಯಾಯಾಲಯವು ಅಧಿಸೂಚಿಸಿದಂತೆ ಹುದ್ದೆಗಳ ವಿವರದ ಪಿಡಿಎಫ್ ಅನ್ನು ಯಾದಗಿರಿ ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ಗೆ ಭೇಟಿ ನೀಡಿ ಡೌನ್ಲೋಡ್ ಮಾಡಿ ಕೊನೆಯವರೆಗೂ ಗಮನವಿಟ್ಟು ಓದಿ ಹಾಗೂ ಅಲ್ಲಿ ಯಾವ ಯಾವ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕು ಆ ಹುದ್ದೆಯ ಅಪ್ಲೈ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೊಟ್ಟಿರುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಮತ್ತೊಮ್ಮೆ ನೀವು ನೀಡಿರುವ ಎಲ್ಲಾ ವಿವರವು ಸರಿ ಇದೆ ಅಥವಾ ಇಲ್ಲವೇ ಎಂದು ಸರಿಯಾಗಿ ನೋಡಿಕೊಂಡು ಒಂದು ವೇಳೆ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಂಡು ಆನ್ಲೈನ್ ಮುಖಾಂತರ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://yadgir.dcourts.gov.in/notice-category/recruitments/

ಗೆಳೆಯರೇ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಯಾದಗಿರಿ ಜಿಲ್ಲಾ ನ್ಯಾಯಾಲಯದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಯಾದಗಿರಿ ಜಿಲ್ಲಾ ನ್ಯಾಯಾಲಯ ದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಶುಲ್ಕ ಈ ಕೆಳಗಿನಂತಿದೆ

  • Category-1,Category-2A,Category-2B, Category-3A,Category-3B ಈ ಎಲ್ಲ ವರ್ಗಗಳಿಗೆ ಅರ್ಜಿ ಶುಲ್ಕ-100 ರೂಪಾಯಿಗಳು
  • ಇತರೆ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ-200 ರೂಪಾಯಿಗಳು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದೇಂದರೆ ಫೆಬ್ರುವರಿ 15 2024(February 15,2024) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ

ಇದನ್ನು ಸಹ ಓದಿ

ಸ್ನೇಹಿತರೆ ರಾಜ್ಯದ ಎಲ್ಲಾ ಜನರಿಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ಭಾರತದಲ್ಲಿ ನಡೆಯುವ ದಿನನಿತ್ಯದ ಹೊಸ ಸುದ್ದಿಗಳು ಮತ್ತು ಸರಕಾರದ ಹೊಸ ಹೊಸ ಯೋಜನೆಗಳು ಮತ್ತು ಖಾಲಿ ಇರುವ ಸರಕಾರದ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ