Pm vishwakarma yojana-ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ
ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ದೇಶದ ಎಲ್ಲಾ ಬಡ ಕುಟುಂಬಗಳಿಗೆ ಆರ್ಥಿಕ ನೆರವಿಗಾಗಿ ಯೋಜನೆಯನ್ನು ಮಾನ್ಯ ಶ್ರೀ ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಅವರು ಜಾರಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಹಣ ಯಾರ್ಯಾರಿಗೆ ಸಿಗುತ್ತದೆ ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಮತ್ತು ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಕೊಟ್ಟಿದ್ದೇವೆ ಆದ್ದರಿಂದ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಯಾವಾಗ ಆರಂಭವಾಯಿತು ಅಂದರೆ, ಸೆಪ್ಟೆಂಬರ್ 17 2023 ರಂದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ದೇಶದ ಎಲ್ಲಾ ಕುಶಲಕರ್ಮಿ ಕುಟುಂಬಗಳಿಗೆ ಉಪಯೋಗವಾಗಲೆಂದು ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಅದು ಹೇಗೆ ಎಂದು ನಾವು ಕೆಳಗೆ ನೀಡಿರುತ್ತೇವೆ
ಈ ಯೋಜನೆಯ ಯಾರಿಗೆ?
18 ಸಾಂಪ್ರದಾಯಕ ಕ ಕುಶಲಕರ್ಮಿ ಕೆಲಸಗಾರರಿಗೆ
- ಟೈಲರ್
- ಗಾರೆ ಕೆಲಸಗಾರ
- ಕ್ಷೌರಿಕ
- ಬಡಗಿ (ಮರದ ಕೆಲಸಗಾರ)
- ಅಗಸರು
- ಅಕ್ಕಸಾಲಿಗರು
- ದೋಣಿ ತಯಾರಕರು
- ಆಯುಧ ತಯಾರಕರು
- ವಿಗ್ರಹ ತಯಾರಕರು
- ಚಮ್ಮಾರರು
- ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು
- ಬೀಗ ತಯಾರಕರು
- ಕಂಬಾರರು
- ಕುಂಬಾರರು
- ಬುಟ್ಟಿ, ಚಾಪೆ, ಕಸ ಪೊರಕೆ ತಯಾರುಕರು
- ಆಟಿಕೆ ತಯಾರಕರು
- ಹೂ ಮಾರುವವರು
- ಮೀನು ಮಾಡುವವರು
ಈ ಮೇಲೆ ಕೊಟ್ಟಿರುವ ಕುಶಲಕರ್ಮಿಗಳ ಪಟ್ಟಿಯಲ್ಲಿರುವ ಎಲ್ಲರಿಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಹಣ ಸಿಗುತ್ತದೆ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನಗಳೇನು?
- ಐದು ದಿನ ತರಬೇತಿ (ತರಬೇತಿ ಪಡೆದವರಿಗೆ ದಿನಕ್ಕೆ 500 ಸಂಭಾವನೆ)
- ತರಬೇತಿ ನಂತರ 15,000 ರೂ (ಟೋಲ್ ಕಿಟ್ ಖರೀದಿಸಲು)
- ಮೊದಲ ಬಾರಿಗೆ ಒಂದು ಲಕ್ಷ ರೂಪಾಯಿ ಆಧಾರ ರಹಿತ ಸಾಲ(5% ದರದಲ್ಲಿ)
- 18 ತಿಂಗಳು ಒಳಗೆ ಸಾಲ ಹಿಂದಿರುಗಿಸಿದರೆ
- ಮತ್ತೆ ಮೂರು ಲಕ್ಷದವರೆಗೆ ಸಾಲ (5% ದರದಲ್ಲಿ)
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಅರ್ಜಿ ಸಲ್ಲಿಸುವವರು ಖುದ್ದಾಗಿ ಹೋಗಬೇಕು
ನೀವು ಈ ಅರ್ಜಿಯನ್ನು ನಿಮ್ಮ ಮೊಬೈಲ್ ನಲ್ಲಿ ಹಾಕಲು ಸಾಧ್ಯವಾಗುವುದಿಲ್ಲ ಆದ್ದರಿಂದ ನಿಮಗೆ ಸಮೀಪವಾದ ಗ್ರಾಮವನ್ ಕೇಂದ್ರ ಇಲ್ಲವೇ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯು ಯಾವುದೇ ಕೊನೆಯ ದಿನಾಂಕವನ್ನು ಹೊಂದಿರುವುದಿಲ್ಲ.
ಇನ್ನಷ್ಟು ಓದಿ
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ನಾವು ದಿನಾಲು ಇದೇ ತರಹದ ದಿನನಿತ್ಯವೂ ನಡೆಯುವ ಸುದ್ದಿಗಳು ಸರಕಾರ ಬಿಡುಗಡೆ ಮಾಡುವ ಹೊಸ ಹೊಸ ಯೋಜನೆಗಳು ಮತ್ತು ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ