Karnataka 2nd PUC Result 2025: ನಮಸ್ಕಾರ ಎಲ್ಲರಿಗೂ ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದ ಫಲಿತಾಂಶ ಗೋಸ್ಕರ ಕಾದು ಕುಳಿತಿರುವ ಅಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಯಾಕೆಂದರೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ಆಗುವ ಬಗ್ಗೆ ಇದೀಗ ಸುಳಿವುಗಳು ತಿಳಿದು ಬಂದಿದೆ. ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ ಬಿಡುಗಡೆ ಆಗಲಿದೆ ಎಂಬ ಮಾಹಿತಿಯನ್ನು ನೀವು ಈ ಲೇಖನದ ಮೂಲಕ ಕಾಣುತ್ತೀರ. ಆದಕಾರಣ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ಓದಿ ಪೂರ್ತಿ ವಿವರವು ನಿಮಗೆ ತಿಳಿಯುತ್ತದೆ.
ದ್ವಿತೀಯ ಪಿಯುಸಿ ಫಲಿತಾಂಶ: Karnataka 2nd PUC Result 2025
ಕಳೆದ ತಿಂಗಳು ಮಾರ್ಚ್ 1ನೇ ತಾರೀಖಿನಿಂದ ಮಾರ್ಚ್ 20 ರವರೆಗೆ ನಡೆದಿರುವಂತಹ ದ್ವಿತೀಯ ಪಿಯುಸಿ ಪರೀಕ್ಷೆಗಳು ಇದರಲ್ಲಿ ಒಟ್ಟು 7 ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 6,60,000 ವರೆಗೆ ಹೊಸ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ ಇನ್ನುಳಿದಿರುವಂತಹ ಸುಮಾರು 34,000 ಮರುಪರೀಕ್ಷೆ ಬರೆಯುತ್ತಿರುವಂತಹ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ ಪ್ರಕಟಣೆ?
ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶವು ನಿಮಗೆಲ್ಲಾ ಗೊತ್ತಿರುವ ಹಾಗೆ ಏಪ್ರಿಲ್ 10ನೇ ತಾರೀಕಿನಂದು ಬಿಡುಗಡೆ ಆಗಿತ್ತು. ಈ ವರ್ಷವೂ ಕೂಡ ಸರಿ ಸುಮಾರು ಅದೇ ಸಮಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC Result 2025) ವು ಪ್ರಕಟಣೆ ಆಗುವ ಸಾಧ್ಯತೆ ಇರುತ್ತದೆ. ದ್ವಿತೀಯ ಪಿಯುಸಿ ಮಕ್ಕಳ ಪರೀಕ್ಷೆಯ ಮೌಲ್ಯಮಾಪನ ಕ್ರಿಯೆಯು ಇದೀಗ ಕೊನೆಯ ಹಂತದಲ್ಲಿದ್ದು ಏಪ್ರಿಲ್ ಮೊದಲ ವಾರದ ಒಳಗಾಗಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯು ತಿಳಿದು ಬಂದಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕರ್ನಾಟಕ ಫಲಿತಾಂಶ ಬಿಡುಗಡೆ ಆಗುವಂತಹ ಅಧಿಕೃತ ಜಾಲತಾಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಬಹುದಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು karresults.nic.in ಈ ಅಧಿಕೃತ ಜಾಲತಾಣದಲ್ಲಿ ಕಾಣಬಹುದಾಗಿದೆ. ವಿದ್ಯಾರ್ಥಿಗಳು ಮೇಲೆ ನೀಡಿರುವ ಜಾಲತಾಣವನ್ನು ಬಳಸುವ ಮೂಲಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಮೇಲೆ ನೀಡಿರುವಂತಹ ಜಾಲತಾಣವನ್ನು ಬಳಸಿಕೊಂಡು ಓಪನ್ ಮಾಡಿಕೊಂಡ ನಂತರ ನಿಮಗೆ ದ್ವಿತೀಯ ಪಿಯುಸಿ ಫಲಿತಾಂಶ(2nd PUC Result)ದ ಡೈರೆಕ್ಟ ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿಕೊಂಡ ತಕ್ಷಣ ನೀವು ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ವಿದ್ಯಾರ್ಥಿಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.
ಗೃಹಲಕ್ಷ್ಮಿ ಯೋಜನೆಯ 4,000 ಹಣ ಇದೇ ತಿಂಗಳು ಕ್ಲಿಯರ್.! ಇಲ್ಲಿದೆ ಸಚಿವೆ ನೀಡಿದ ಮಾಹಿತಿ.!
ದ್ವಿತೀಯ ಪಿಯುಸಿ ಫಲಿತಾಂಶ ಇನ್ನೇನು ಕೆಲವೇ ದಿನಗಳಲ್ಲಿ ಹೊರ ಬೀಳುವ ಸಾಧ್ಯತೆಯಿದ್ದು ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ಪರೀಕ್ಷೆಯ ಫಲಿತಾಂಶ ಚೆನ್ನಾಗಿ ಬಂದಿದ್ದರೆ ನೀವು ಉತ್ತಮವಾದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಿ. ಪರೀಕ್ಷೆಯಲ್ಲಿ ಫೇಲ್ ಆದಂತಹ ವಿದ್ಯಾರ್ಥಿಗಳಿಗೂ ಕೂಡ ತಿಳಿಸುವುದೇನೆಂದರೆ, ಮುಂಬರುವ ಪರೀಕ್ಷೆಗಳಲ್ಲಿ ಉತ್ತಮವಾದ ಅಂಕಗಳಿಸಿ.
ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ ಪರೀಕ್ಷ ಪಲಿತಾಂಶವನ್ನು ಪ್ರಕಟಣೆ ಮಾಡಿದ ತಕ್ಷಣ ನಿಮಗೆ ನಮ್ಮ ಜಾಲತಾಣದ ಮೂಲಕ ತಿಳಿಸಲಾಗುವುದು. ಆದ್ದರಿಂದ ನೀವು ನಮ್ಮ ಹೊಸ ನೋಡಿ ಜಾಲತಾಣವನ್ನು ಭೇಟಿ ನೀಡಬಹುದಾಗಿರುತ್ತದೆ ಇಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ.