ಗೃಹಲಕ್ಷ್ಮಿ ಹಣ ಬಂದಿಲ್ಲವೇ? ಕೂಡಲೇ e kyc ಮಾಡಿಸಿ!

Gruhalaxmi eKYC-ಗೃಹಲಕ್ಷ್ಮಿ ಈ ಕೆವೈಸಿ

ಸ್ನೇಹಿತರೆ ರಾಜ್ಯದ ಎಲ್ಲಾ ಜನರಿಗೆ ತಿಳಿಸುವುದೇನೆಂದರೆ ಕಾಂಗ್ರೆಸ್ ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಜಮೆ ಆಗದೆ ಇರುವುದಕ್ಕೆಕಾರಣವೇನು? ಮತ್ತು ಹಣ ಏಕೆ ಜಮಾ ಆಗುತ್ತಿಲ್ಲ? ಹಣ ಜಮೆಯಾಗಲು ಏನು ಮಾಡಬೇಕು? ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 2,000ಗಳನ್ನು ಯಾವುದೇ ಮಧ್ಯವರ್ತಿ ಇಲ್ಲದೆ ನೇರ ರಾಜ್ಯ ಮಹಿಳೆಯರ ಖಾತೆಗೆ ಜಮೆ ಮಾಡುತ್ತಿದ್ದು ಇಲ್ಲಿಯವರೆಗೆ 6ನೇ ಕಂತಿನ ಹಣ ಯಶಸ್ವಿಯಾಗಿ ರಾಜ್ಯದಲ್ಲ ಮಹಿಳೆಯರ ಬ್ಯಾಂಕ್ ಖಾತೆಗೆ ಬಿದ್ದಿದ್ದು ಇನ್ನೂ ಕೆಲವರ ಗೃಹಲಕ್ಷ್ಮಿ ಹಣವು ಬಂದಿರುವುದಿಲ್ಲ ಇದಕ್ಕೆ ಕಾರಣವೇನು? ಹಣ ಜಮೆಯಾಗಲು ಏನು ಮಾಡಬೇಕು? ಮತ್ತು ಎಲ್ಲಿ ಹೋಗಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಹೇಳುತ್ತೇವೆ

ಹಣ ಜಮೆಯಾಗದಿರಲು ಕಾರಣಗಳೆಂದರೆ?

  • ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಜೋಡಣೆ ಆಗದೆ ಇರುವುದು
  • ಪಡಿತರ ಚೀಟಿಗೆ ಮುಖ್ಯಸ್ಥೆಯ ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇರುವುದು
  • ಆಧಾರ್ ಕಾರ್ಡಿಗೆ ಮುಖ್ಯಸ್ಥೆಯ ಬೆರಳಿನ ಅಪ್ಡೇಟ್ ಮಾಡದೇ ಇರುವುದು
  • ಈ ಕೆ ವೈ ಸಿ ಮಾಡದೇ ಇರುವುದು

ಗೃಹಲಕ್ಷ್ಮಿ ಹಣ ಜಮಾ ಆಗುವುದಕ್ಕಾಗಿ ಏನು ಮಾಡಬೇಕೆಂದರೆ?

  • ಕುಟುಂಬದ ಮುಖ್ಯಸ್ಥೆಯು ತನ್ನ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಬ್ಯಾಂಕ ಖಾತೆಯನ್ನು ತೆಗೆದುಕೊಂಡು ಬ್ಯಾಂಕಿಗೆ ಹೋಗಿ ಈ ಕೆ ವೈ ಸಿ ಮಾಡಿಸುವುದು
  • ಆಹಾರ ಇಲಾಖೆಗೆ ಭೇಟಿ ನೀಡಿ ತನ್ನ ಆಧಾರ್ ಕಾರ್ಡ್ ಪಡಿತರ ಚೀಟಿಗೆ ಜೋಡಣೆ ಆಗಿದೆಯೋ ಅಥವಾ ಇಲ್ಲವೋ ಎಂದು ಪರಿಶೀಲಿಸುವುದು
  • ಮುಖ್ಯಸೆಯು ತನ್ನ ಆಧಾರ್ ಕಾರ್ಡಗೆ ಬೆರಳಿನ ಅಪ್ಡೇಟ್ ಅನ್ನು ಮಾಡುವುದು
  • ಈ ಕೆವೈಸಿ(eKYC) ಮಾಡಿಸುವುದು

ಈ ಕೆ ವೈ ಸಿ ಮಾಡಿಸುವುದು ಹೇಗೆ?

ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರ ಅಥವಾ ಕರ್ನಾಟಕವನ್ನು ಕೇಂದ್ರ ಇಲ್ಲವಾದರೆ ಸೇವಾ ಸಿಂಧು ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಕೊಟ್ಟು ಈಕೆವೈಸಿ ಮಾಡಿಸಿ ಅಥವಾ ನಿಮ್ಮ ಮೊಬೈಲ್ನ ಗೂಗಲ್ ನಲ್ಲಿ ಸೇವಾ ಸಿಂಧು ಎಂದು ಸರ್ಚ್ ಮಾಡಿ ಸೇವಾ ಸಿಂಧು ಫೋರಟಲ್ಗೆ ಲಾಗಿನ್ ಆಗಿ ಅಲ್ಲಿ ಕಾಣುವ ಈಕೆವೈಸಿ(eKYC) ಫಾರ್ ಗೃಹಲಕ್ಷ್ಮಿ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಗೃಹಲಕ್ಷ್ಮಿ ಕೆ ವೈ ಸಿ ಯನ್ನು ಮಾಡಿಸಬಹುದಾಗಿದೆ ಸೇವ ಸಿಂಧು ಪೋರ್ಟಲ್ ನಲಿಂಕನ್ನು ನಾವು ಕೆಳಗೆ ನೀಡಿದ್ದೇವೆ ಇದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಸೇವಾಸಿಂದು ಪೋರ್ಟಲ್ಗೆ ಭೇಟಿ ನೀಡಬಹುದು

https://sevasindhuservices.karnataka.gov.in/

ಸ್ನೇಹಿತರೆ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನೀವು ಡೈರೆಕ್ಟಾಗಿ ಸೇವಾಸಿಂದು ಪೋರ್ಟಲ್ ಲಾಗಿನ್ ಪೇಜ್ ಗೆ ಹೋಗುತ್ತೀರಾ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗಿ

ಮತ್ತಷ್ಟು ಓದಿ

ನಮ್ಮ ಈ ಮಾಧ್ಯಮವು ದಿನನಿತ್ಯದ ಸುದ್ದಿಗಳು ಮತ್ತು ಸರಕಾರದ ಯೋಜನೆಗಳು ಮತ್ತು ಕಾಲಿ ಇರುವ ಹುದ್ದೆಗಳ ಬಗ್ಗೆ ರಾಜ್ಯದ ಎಲ್ಲಾ ಜನರಿಗೆ ತಿಳಿಸುವ ಒಂದು ಕರ್ನಾಟಕದ ಮಾಧ್ಯಮವಾಗಿದೆ