Baraparihar payment update-ಬರ ಪರಿಹಾರ ಹಣ ಸ್ಥಿತಿ ಪರಿಶೀಲಿಸಿ
ಸ್ನೇಹಿತರೆ ರಾಜ್ಯದ ಎಲ್ಲಾ ರೈತರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಬರಹ ಪರಿಹಾರ ಧನವನ್ನು ನೀಡುತ್ತಿದೆ ನಿಮಗೂ ಕೂಡ ಬರ ಪರಿಹಾರದ ಹಣಬಂತೆ ಅಥವಾ ಇಲ್ಲವೇ ಎಂದು ಚೆಕ್ ಮಾಡುವ ವಿಧಾನವನ್ನು ನಾನು ಈ ಲೇಖನದಲ್ಲಿ ಹೇಳುತ್ತೇನೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ
ರಾಜ್ಯದ ಎಲ್ಲಾ ರೈತರಿಗೆ ಕರ್ನಾಟಕ ಸರ್ಕಾರವು ನೀಡುತ್ತಿರುವ ಬರಹ ಪರಿಹಾರ ಸ್ಥಿತಿಯನ್ನು ಚೆಕ್ ಮಾಡಲು ನಾವು ಕೆಳಗಡೆ ಡೈರೆಕ್ಟ್ ಲಿಂಕನ್ನು ಕೊಟ್ಟಿರುತ್ತೇವೆ ಆ ಲಿಂಕನ್ನು ಬಳಸಿಕೊಂಡು ನೀವು ನಿಮಗೆ ಬರ ಪರಿಹಾರ ಹಣ ಬಂತು ಅಥವಾ ಇಲ್ಲವೇ ಎಂದು ಪರಿಶೀಲಿಸಿಕೊಳ್ಳಿ ಮತ್ತು ನಿಮಗೆ ಬರ ಪರಿಹಾರದ ಹಣದ ಸ್ಥಿತಿಯನ್ನು ಹೇಗೆ ಚೆಕ್ ಮಾಡುವುದು ಎಂದು ಗೊತ್ತಿಲ್ಲದಿದ್ದರೆ ನಾವು ಈ ಒಂದು ಆರ್ಟಿಕಲ್ ನಲ್ಲಿ ನೀವು ಎಲ್ಲಿ ಬರ ಪರಿಹಾರದ ಹಣದ ಸ್ಥಿತಿಯನ್ನು ಚೆಕ್ ಮಾಡಬೇಕು ಚೆಕ್ ಮಾಡುವ ವಿಧಾನ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ಕೊಟ್ಟಿರುತ್ತೇವೆ ಆದ್ದರಿಂದ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಓದಿ
ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ನೆರವಾಗಲೆಂದು ಬರ ಪರಿಹಾರ ಹಣವನ್ನು ನೀಡುತ್ತಿದ್ದು ಇಲ್ಲಿಯವರೆಗೂ ಯಶಸ್ವಿಯಾಗಿ ನೀಡುತ್ತಾ ಬಂದಿದೆ ಈ ಒಂದು ಯೋಜನೆಯು ರೈತರಿಗೆ ತುಂಬಾ ಸಹಾಯಕವಾಗಿದೆ ಮತ್ತು ಯಾವುದೇ ಮಧ್ಯವರ್ತಿ ಇಲ್ಲದೆ ನೇರ ರೈತರ ಖಾತೆಗೆ ಹಣ ಜಮಾ ಮಾಡುವುದರಿಂದ ರೈತರು ತುಂಬಾ ಸುಲಭವಾಗಿ ಹಣವನ್ನು ಪಡೆಯಬಹುದಾಗಿದೆ ಕರ್ನಾಟಕ ಸರ್ಕಾರವು ಬರ ಪರಿಹಾರ ಹಣವನ್ನು ಇದೆ ಜನವರಿ 5 2024ರಂದು ಜಮೆ ಮಾಡಲಾಗಿದೆ ಆದ್ದರಿಂದ ನೀವು ಕೂಡ ನಿಮ್ಮ ಬರ ಪರಿಹಾರ ಹಣದ ಸ್ಥಿತಿಯನ್ನು ಚೆಕ್ ಮಾಡಿ ಇನ್ನು ಕೆಲವು ರೈತರಿಗೆ ಹಣ ಬಂದಿಲ್ಲ ಅದು ಕೂಡ ಆದಷ್ಟು ಬೇಗ ಬರುತ್ತದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ
ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರ ಹಣವನ್ನು ಚೆಕ್ ಮಾಡಲು ನಾವು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruitspmk.karnataka.gov.in/MISReport/FarmerDeclarationReport.aspx
ಸ್ನೇಹಿತರೆ ಈ ಮೇಲೆ ಕೊಟ್ಟಿರುವ ಲಿಂಕ್ ನ ಮೂಲಕ ನೀವು ಫ್ರೂಟ್ ಪಿಎಂ ಕಿಸಾನ್ ಅಫೀಷಿಯಲ್ ವೆಬ್ ಸೈಟಿಗೆ ಭೇಟಿ ನೀಡುತ್ತೀರಾ ಭೇಟಿ ನೀಡಿದ ಮೇಲೆ ಅಲ್ಲಿ ನಿಮ್ಮ ರಾಜ್ಯ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಮತ್ತು ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿ ಆಯ್ಕೆ ಮಾಡಿದ ಮೇಲೆ ಅಲ್ಲಿ ವೀಕ್ಷಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಊರಿನ ಎಲ್ಲಾ ರೈತರ ಲಿಸ್ಟ್ ಅಲ್ಲಿ ತೋರಿಸುತ್ತದೆ ಅದರಲ್ಲಿ ನಿಮ್ಮ ಹೆಸರನ್ನು ಹುಡುಕಿಕೊಳ್ಳಿ ಒಂದು ವೇಳೆಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಬರ ಪರಿಹಾರ ಹಣ ಸಿಕ್ಕಿದೆ ಎಂದು ಭಾವಿಸಿ ಅಷ್ಟೇ ಅಲ್ಲ ನಿಮಗೆ ಏನಾದರೂ ನಿಮ್ಮ ಹೆಸರಿಂದ ಹುಡುಕಲು ಸಮಸ್ಯೆ ಆದರೆ ಅಲ್ಲಿ ನಿಮ್ಮ ಎಫ್ ಐ ಡಿ (FID) ನಂಬರ್ ಇಂದ ಹುಡುಕಿಕೊಳ್ಳಬಹುದು
ಇನ್ನಷ್ಟು ಓದಿ
ಸ್ನೇಹಿತರೆ ನಮ್ಮ ಈ ಮಾಧ್ಯಮವು ಪ್ರತಿನಿತ್ಯವೂ ನಡೆಯುವ ಸುದ್ದಿ ಮತ್ತು ಸರಕಾರದ ಹೊಸ ಹೊಸ ಯೋಜನೆ ಮತ್ತು ಖಾಲಿ ಇರುವ ಸರಕಾರಿ ಕೆಲಸಗಳ ಬಗ್ಗೆ ಮಾಹಿತಿ ನೀಡುವ ಒಂದು ಮಾಧ್ಯಮವಾಗಿದೆ