Application for yuvanidhi-ಯುವ ನಿಧಿ ಅರ್ಜಿ
ಸ್ನೇಹಿತರೆ ಈ ಲೇಖನ ಮೂಲಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ಯುವ ನಿಧಿ ನಿರುದ್ಯೋಗ ಭತ್ಯೆಗೆ ಅರ್ಜಿಗಳು ಆರಂಭವಾಗಿದ್ದು ನೀವು ಇನ್ನೂ ಅರ್ಜಿಯನ್ನು ಸಲ್ಲಿಸದೆ ಇದ್ದರೆ ಬೇಗನೆ ಅರ್ಜಿಯನ್ನು ಸಲ್ಲಿಸಿ.
ಯುವನಿಧಿಗೆ ಅರ್ಜಿ ಹಾಕಲು ಯಾರು ಅರ್ಹ ವಿದ್ಯಾರ್ಥಿಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಇಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ
ಕರ್ನಾಟಕ ಸರ್ಕಾರದ ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ನಿರುದ್ಯೋಗ ಬತ್ತೆಗೆ ಅರ್ಜಿಗಳು ಇದೇ ಡಿಸೆಂಬರ್ 26, 2023ರಿಂದ ಕರ್ನಾಟಕ ರಾಜ್ಯ ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ ಆದರೆ ಇನ್ನು ಹಲವಾರು ಉಳಿದ ವಿದ್ಯಾರ್ಥಿಗಳು ಇನ್ನು ಅರ್ಜಿಗಳನ್ನು ಸಲ್ಲಿಸದೆ ಇರುವ ಕಾರಣ ಅರ್ಜಿಗಳ ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ
ಯಾರಿಗೆ ಸಿಗಲಿದೆ ಯುವ ನಿಧಿ ನಿರುದ್ಯೋಗ ಭತ್ಯೆಯ ಹಣ
- ಪದವೀಧರರಿಗೆ
- ಯುವ ನಿಧಿ ಯೋಜನೆಗೆ ಯಾರು ಅರ್ಹರು?
- ಪದವಿ ಶಿಕ್ಷಣ ಮುಗಿಸಿದವರಿಗೆ
- ಪದವಿ ಶಿಕ್ಷಣ ಮುಗಿಸಿ ಆರು ತಿಂಗಳಾದರೂ ಎಲ್ಲಿಯೂ ಕೆಲಸ ಸಿಗದೇ ಇರುವವರಿಗೆ
- 2022 2023ರ ಸಾಲಿನ ವರ್ಷದಲ್ಲಿ ಪಾಸಾದ ಪದವಿ ವಿದ್ಯಾರ್ಥಿಗಳಿಗೆ
ಯುವ ನಿಧಿ ಯೋಜನೆಯ ಪ್ರಯೋಜನಗಳೇನು?
- ಪದವೀಧರ ನಿರುದ್ಯೋಗ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ರೂಪಾಯಿಗಳು
- ಡಿಪ್ಲೋಮೋ ಮಾಡಿದವರಿಗೆ ಪ್ರತಿ ತಿಂಗಳು 1500 ರೂಪಾಯಿಗಳು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
- ವಿದ್ಯಾರ್ಥಿ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಮೊಬೈಲ್ ನಂಬರ್
- ಪದವಿ ಶಿಕ್ಷಣದ ಕೊನೆಯ ಅಂಕಪಟ್ಟಿ
- ಹತ್ತನೇ ತರಗತಿ ಅಂಕಪಟ್ಟಿ
- ದ್ವಿತೀಯ ಪಿಯುಸಿಯ ಅಂಕಪಟ್ಟಿ
ಅರ್ಜಿ ಸಲ್ಲಿಸುವುದು ಹೇಗೆ?
ಯುವ ನಿಧಿ ಯೋಜನೆಗೆ ಅರ್ಜಿಯನ್ನು ನೀವು ಡೈರೆಕ್ಟಾಗಿ ನಿಮ್ಮ ಮೊಬೈಲಲ್ಲಿ ಸಲ್ಲಿಸಬಹುದು ಅದು ಹೇಗೆ ಅಂದರೆ ನಾವು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
https://sevasindhuservices.karnataka.gov.in/directApply.do?serviceId=2079
ಈ ಮೇಲಿನ ಲಿಂಕನ್ನು ನೀವು ಕ್ಲಿಕ್ ಮಾಡಿದಾಗ ಅದು ನಿಮ್ಮನ್ನು ಸೇವಾ ಸಿಂಧು ಪೋರ್ಟಲ್ ಗೆ ಕರೆದೊಯ್ಯುತ್ತದೆ ಅಲ್ಲಿ ನೀವು ಲಾಗಿನ್ ಆಗಿ ಇಲ್ಲವಾದರೆ ರಿಜಿಸ್ಟ್ರೇಷನ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ಅದಾದ್ಮೇಲೆ ಲಾಗಿನ್ ಆಗಿ ಸರ್ಚ್ ಬಾಕ್ಸ್ ಅಲ್ಲಿ ಯುವ ನದಿ ಎಂದು ಟೈಪ್ ಮಾಡಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಇನ್ನಷ್ಟು ಓದಿ
ಸ್ನೇಹಿತರೆ ರಾಜ್ಯದ ಎಲ್ಲಾ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ಪ್ರತಿನಿತ್ಯ ನಡೆಯುವ ಸುದ್ದಿಗಳು ಸರಕಾರದ ಹೊಸ ಹೊಸ ಯೋಜನೆಗಳು ಮತ್ತು ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡುವ ಒಂದು ಮಾಧ್ಯಮವಾಗಿದೆ