Annabhagya Scheme: ಅನ್ನಭಾಗ್ಯ ಯೋಜನೆ ಹೊಸ ಅಪ್ಡೇಟ್.! ಮನೆ ಬಾಗಿಲಿಗೆ ಅಕ್ಕಿ.? ಏನಿದು ಹೊಸ ವಿಷ್ಯಾ.?

Annabhagya Scheme: ಅನ್ನಭಾಗ್ಯ ಯೋಜನೆ ಹೊಸ ಅಪ್ಡೇಟ್.! ಮನೆ ಬಾಗಿಲಿಗೆ ಅಕ್ಕಿ.? ಏನಿದು ಹೊಸ ವಿಷ್ಯಾ.?

ರೇಷನ್ ಕಾರ್ಡ್ e-KYC: ಸೆಪ್ಟೆಂಬರ್ 30ರೊಳಗೆ ಈ ಕೆಲಸ ಮುಗಿಸಿ – ಮನೆಯಿಂದಲೇ ಮಾಡಿಕೊಳ್ಳುವ ವಿಧಾನ ಇಲ್ಲಿದೆ

ಅನ್ನಭಾಗ್ಯ ಯೋಜನೆಯ ಹಿರಿಯ ಫಲಾನುಭವಿ ನಾಗರಿಕರಿಗೆ ಒಂದು ಖುಷಿ ವಿಚಾರ ಎಂದು ಹೇಳಬಹುದು ಯಾಕೆಂದರೆ, ಬೆರಳಚ್ಚು ವಿನಾಯತಿ ಮೂಲಕ ಪಡಿತರ ಪಡೆಯಲು ಹೊಸ ಅನುಕೂಲಕ್ಕೆ ದಾರಿ ಮಾಡಿಕೊಡಲು ಸರ್ಕಾರ ಯೋಚಿಸಿದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಅನ್ನಭಾಗ್ಯ ಯೋಜನೆ (Annabhagya Scheme)

ಅನ್ನಭಾಗ್ಯ ಯೋಜನೆಯ ಕರ್ನಾಟಕದಲ್ಲಿ ಸರ್ಕಾರವು ಜಾರಿಗೆ ತಂದಿರುವಂತಹ ಯೋಜನೆಯಾಗಿದೆ ಈ ಯೋಜನೆಯ ಮೂಲಕ ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಂದು ಕುಟುಂಬವು ಪ್ರತಿ ತಿಂಗಳು ಕೂಡ ಸರ್ಕಾರದ ಕಡೆಯಿಂದ ಉಚಿತವಾಗಿ ಅಕ್ಕಿ ಹಾಗು ಇನ್ನಿತರ ಪಡಿತರಗಳನ್ನು ಪಡೆಯುವಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.

ಏನಿದು Annabhagya Scheme ಹೊಸ ಅಪ್ಡೇಟ್.?

ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು ನೀಡುವ ಸಂದರ್ಭದಲ್ಲಿ ಯಂತ್ರವು ಇಂತವರ ಬೆರಳುಗಳನ್ನು ಓದುವುದಿಲ್ಲ, ಕಟ್ಟಡ ಕಾರ್ಮಿಕ ಹಾಗೂ ರೈತರ ಬೆರಳಚ್ಚುಗಳು ಅತಿಯಾದ ದುಡಿಮೆಯಿಂದ ಹಾಗೂ ಹೆಚ್ಚಿನ ಪ್ರಮಾಣದ ಕೆಲಸ ಮಾಡುವುದರಿಂದ ಬೆರಳ ರೇಖೆಗಳು ಸವೆದು ಯಂತ್ರವು ಅದನ್ನು ಓದಲು ವಿಫಲವಾಗಬಹುದು.

ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 75 ವರ್ಷ ದಾಟಿರುವಂತಹ ಹಿರಿಯ ನಾಗರಿಕರಿಗೆ ಹಾಗೂ ಇನ್ನಿತರ ಅರ್ಹ ಫಲಾನುಭವಿಗಳಿಗೆ ಬೆರಳಚ್ಚು ವಿನಾಯಿತಿಯ ಮೂಲಕ ಪಡಿತರ ಒದಗಿಸುವ ಅವಕಾಶವನ್ನು ಕಲ್ಪಿಸಿ ಕೊಡುವ ಪರಿಕಲ್ಪನೆಯನ್ನು ಯೋಚಿಸಿದೆ.

ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ 2% ನಷ್ಟು ಫಲಾನುಭವಿಗಳ ಬೆರಳಚ್ಚು ವಿನಾಯಿತಿಯನ್ನು ನೀಡಲು ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. 75 ವರ್ಷ ಮೇಲ್ಪಟ್ಟಿರುವಂತಹ ನಾಗರಿಕರ ಬೆರಳಚ್ಚು ವಿನಾಯಿತಿ ನೀಡುವಂತಹ ಯೋಜನೆಯನ್ನು ಹೊಂದಿದೆ.

Annabhagya Scheme
Annabhagya Scheme

 

ವಯಸ್ಸಾದವರು, ಅನಾರೋಗ್ಯ ಹೊಂದಿದವರು, ಹಾಗೂ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ ನ್ಯಾಯಬೆಲೆ ಅಂಗಡಿಯ ಹತ್ತಿರ ಹೋಗಲು ಅಸಾಧ್ಯವಾದವರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

ಹಿರಿಯರು ಮಾಡಬೇಕಾದ ಕೆಲಸವೇನು.?

ಬೆರಳಚ್ಚು ನೀಡುವಂತಹ ಸಂದರ್ಭದಲ್ಲಿ ನಿಮ್ಮ ಬೆರಳಚ್ಚು ದೊರಕದಿದ್ದರೆ ನ್ಯಾಯಬೆಲೆ ಅಂಗಡಿಯವರಿಗೆ ತಿಳಿಸಿ ಐರಿಸ್ ಅವಕಾಶವಿದೆಯೇ ಎಂದು ಪರಿಶೀಲಿಸಿಕೊಳ್ಳಿ. ನೀವೇನಾದರೂ 75 ವರ್ಷ ಮೇಲ್ಪಟ್ಟಿದ್ದರೆ, ಅನ್ನ ಸುವಿಧ ನೋಂದಣಿ ಮಾಡಿಸಿಕೊಳ್ಳಿ. ಇದರ ಮೇಲೆ ನಿಮ್ಮ ಸಮಸ್ಯೆಗೆ ಪರಿಹಾರ ದೊರಕದಿದ್ದರೆ, 1967ಗೆ ಕರೆ ಮಾಡಿ ಅಥವಾ ಆಹಾರ ಪೋರ್ಟಲ್ ನಲ್ಲಿ ದೂರು ದಾಖಲಿಸಿ.

ಹಿರಿಯ ನಾಗರಿಕರಿಗೆ ರೇಷನ್ ಅಕ್ಕಿಯನ್ನು ಹೊತ್ತು ತರಲು ಆಗುವುದಿಲ್ಲ ಹಾಗೂ ರೇಷನ್ ಅಂಗಡಿಯ ಹತ್ತಿರ ಓಡಾಡುವುದು ಕೂಡ ಕಷ್ಟವಾಗಿರುತ್ತದೆ ಅಂತಹ ಸಂದರ್ಭದಲ್ಲಿ ಇದರ ಪ್ರಯೋಜನವನ್ನು ಪ್ರತಿಯೊಬ್ಬ ಹಿರಿಯ ನಾಗರಿಕರು ಪಡೆಯುವುದು ಅತ್ಯಂತ ಅವಶ್ಯಕವಾದ ವಿಷಯವಾಗಿದೆ. ಇದರ ಪ್ರಯೋಜನ ಪಡೆಯುವುದು ಪ್ರತಿಯೊಬ್ಬ ಹಿರಿಯ ನಾಗರಿಕನ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಹೇಳಬಹುದು.

Leave a Comment