RRB Recruitment 2025: ನಮಸ್ಕಾರ ಎಲ್ಲರಿಗೂ, ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇದೀಗ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆಸಕ್ತಿ ಮತ್ತು ಅರ್ಹತೆ ಇರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವುದು ಯಾವ ರೀತಿಯಾಗಿದೆ?, ಅರ್ಜಿ ಸಲ್ಲಿಸಲು ಅರ್ಹತೆಗಳು ಏನು ಇರಬೇಕು?, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಇದರ ಕುರಿತಾಗಿ ಮಾಹಿತಿಯನ್ನು ನೀಡಲಾಗಿರುತ್ತದೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ.
ರೈಲ್ವೆ ಇಲಾಖೆ ನೇಮಕಾತಿ (RRB Recruitment 2025)
ರೈಲ್ವೆ ಇಲಾಖೆಯಲ್ಲಿ ಇದೀಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸುಮಾರು 9,970 ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಭರ್ಜರಿ ಜಾಬ್ ಆಫರ್ ಅನ್ನು ನೀಡಲಾಗಿದ್ದು, ಇದರ ಬಗ್ಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿರುತ್ತದೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗಡೆ ವಿದ್ಯಾರ್ಹತೆ ಏನಿರಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ.

ವಿದ್ಯಾರ್ಹತೆ:
ನೀವೇನಾದರೂ ಈ ರೈಲ್ವೆ ಇಲಾಖೆಗೆ ಹೊರಡಿಸಿರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ 10ನೇ (SSLC) ತರಗತಿಯ ಜೊತೆಗೆ ಐಟಿಐ (ITI) ಅನ್ನು ಪಾಸ್ ಆಗಿರಬೇಕು ಎಂಬ ವಿದ್ಯಾರ್ಹತೆಯನ್ನು ತಿಳಿಸಲಾಗಿದೆ. ಈ ವಿದ್ಯಾರ್ಹತೆಯನ್ನು ನೀವು ಪೂರೈಸಿದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಾ.
ಕೆನರಾ ಬ್ಯಾಂಕ್ ಖಾತೆದಾರರಿಗೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ.! ಇಲ್ಲಿದೆ ವಿವರ.!
ವಯೋಮಿತಿ:
ರೈಲ್ವೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂಥವರು 18 ವರ್ಷ ಮೇಲ್ಪಟ್ಟಿರಬೇಕು ಮತ್ತು ಗರಿಷ್ಠ 30 ವರ್ಷವನ್ನು ಮೀರಿರಬಾರದು ಎಂಬ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಹುದ್ದೆಗಳ ಸ್ಥಳ:
ತಿರುವನಂತಪುರಂ, ಸಿಲಿಗುರಿ, ಸಿಕಂದರಾಬಾದ್, ರಾಂಚಿ, ಪಾಟ್ನಾ, ಮುಜಫರ್ ನಗರ, ಮುಂಬೈ, ಮಾಲ್ದ, ಕೊಲ್ಕತ್ತಾ, ಜಮ್ಮು ಮತ್ತು ಕಾಶ್ಮೀರ, ಗುವಾಹಟಿ, ಗೋರಖ್ ಪುರ, ಬಿಲಾಶ್ಪುರ್, ಭುವನೇಶ್ವರ್, ಭೂಪಾಲ್, ಪ್ರಯಾಗರಾಜ್, ಅಜ್ಮೀರ್, ಅಹ್ಮದಾಬಾದ್.
ಅರ್ಜಿ ಸಲ್ಲಿಸುವುದು ಹೇಗೆ.?
ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ಮೊದಲು ನೀವು ವಿದ್ಯಾರ್ಹತೆ ಮತ್ತು ವಯೋಮಿತಿಯ ಬಗ್ಗೆ ತಿಳಿದುಕೊಳ್ಳಿ ನಂತರ ಅರ್ಹರಾಗಿದ್ದಲ್ಲಿ ಮತ್ತು ಆಸಕ್ತಿ ಇದ್ದಲ್ಲಿ ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣವಾಗಿರುವ ಈ ಕೆಳಗಡೆ ನೀಡಿರುವಂತಹ ಜಾಲತಾಣವನ್ನು ಬಳಸಿಕೊಂಡು ಈ ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ.
ಮೇಲೆ ನೀಡಿರುವಂತಹ ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣವನ್ನು ಭೇಟಿ ನೀಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು:
- ಅರ್ಜಿಗಳು ಪ್ರಾರಂಭವಾದ ದಿನಾಂಕ: 12/04/2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11/05/2025
- ಶುಲ್ಕ ಪಾವತಿಗೆ ಕೊನೆಯ ದಿನಾಂಕ: 13/05/2025