Karnataka SSLC Result 2025: ನಮಸ್ಕಾರ ಸ್ನೇಹಿತರೇ, ಕರ್ನಾಟಕದಲ್ಲಿ ಇದೀಗ 2024-25 ಸಾಲಿನ ಶೈಕ್ಷಣಿಕ ವರ್ಷದ 10ನೇ ತರಗತಿ ವಾರ್ಷಿಕ ಪರೀಕ್ಷೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಕಳೆದ ತಿಂಗಳು ಅಂದರೆ ಮಾರ್ಚ್ 21ರಿಂದ 10ನೇ ತರಗತಿ ಪರೀಕ್ಷೆಗಳನ್ನು ಆರಂಭಿಸಿ ನಿನ್ನೆ ಅಂದರೆ ಏಪ್ರಿಲ್ 4ರಂದು ಅಂತಿಮವಾಗಿ ಪರೀಕ್ಷೆಯನ್ನು ಪೂರ್ಣಗೊಳಿಸಿದೆ.
Table of Contents
ಈ ಸಲ ಹಲವಾರು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಯನ್ನು ಬರೆದಿದ್ದಾರೆ, ಸರಿಸುಮಾರು 8.96 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗಿದ್ದು ಸುಮಾರು 2800 ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದ್ದು ಪರೀಕ್ಷೆಯ ನಂತರ ನಡೆಯುವ ಮೌಲ್ಯಮಾಪನದ ಮೊದಲ ಹಂತ ಏಪ್ರಿಲ್ 11ರಿಂದ ಆರಂಭವಾಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿದೆ.
Karnataka SSLC Result 2025
ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯ ಮೌಲ್ಯಮಾಪನದ ಮುಖ್ಯ ಹಂತವಾಗಿರುವಂತಹ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 15ರಿಂದ ಶುರುವಾಗಲಿದೆ ಎಂಬ ಮಾಹಿತಿ ತಿಳಿದಿದ್ದು, ರಾಜ್ಯದಾದ್ಯಂತ 240ಕ್ಕೂ ಹೆಚ್ಚು ಮೌಲ್ಯಮಾಪನ ಕೇಂದ್ರಗಳನ್ನು ಇದಕ್ಕಾಗಿ ಸ್ಥಾಪಿಸಲಾಗಿದ್ದು ಈ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಗಳ ಪರಿಶೀಲನೆಯು ನಡೆಯಲಿದೆ ಎಂಬ ಮಾಹಿತಿಯು ಹೊರ ಬಿದ್ದಿದೆ.

10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯ ಮೌಲ್ಯಮಾಪನಕ್ಕಾಗಿ 75,000 ಕ್ಕಿಂತ ಹೆಚ್ಚಿನ ಶಿಕ್ಷಕರನ್ನು ಮೌಲ್ಯಮಾಪಕರನಾಗಿ ಆಯೋಜಿಸಲಾಗಿದ್ದು, ಈ ಶಿಕ್ಷಕರಲ್ಲಿ ಪ್ರಥಮ ದರ್ಜೆ ಹಾಗೂ ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಶಿಕ್ಷಕರು ಕೂಡ ಒಳಗೊಂಡಿರುತ್ತದೆ. ಮೌಲ್ಯಮಾಪನ ಕಾರ್ಯದ ಅವಧಿಯ ಸಮಯದಲ್ಲಿ ನಿಯೋಜಿತ ಶಿಕ್ಷಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ಶಿಕ್ಷಣ ಇಲಾಖೆಯ ಸೂಚಿಸಿರುತ್ತದೆ.
10ನೇ ತರಗತಿ ರಿಸಲ್ಟ್ ಯಾವಾಗ.?
ಸದ್ಯಕ್ಕೆ ಇನ್ನು ಮೌಲ್ಯಮಾಪನವೂ ಆರಂಭವಾಗಿಲ್ಲ ಮೌಲ್ಯಮಾಪನ ಆರಂಭವಾಗಿ ಮುಕ್ತಾಯವಾದ ನಂತರ 10ನೇ ತರಗತಿ ಫಲಿತಾಂಶ ಮಂಡಳಿಯಿಂದ ಅಧಿಕೃತವಾಗಿ ಪ್ರಕಟಣೆ ಆಗಲಿದೆ ಇದಕ್ಕೆ ದಿನಾಂಕವನ್ನು ಕೂಡ ಮಂಡಳಿಯು ಅಧಿಕೃತವಾಗಿ ಪ್ರಕಟಿಸುತ್ತದೆ ಸಾಮಾನ್ಯವಾಗಿ ಮೌಲ್ಯಮಾಪನ ಪ್ರಕ್ರಿಯೆಯು ಸಂಪೂರ್ಣಗೊಂಡ ಬಳಿಕ ಎರಡು ವಾರದ ಒಳಗಾಗಿ ಫಲಿತಾಂಶ ಪ್ರಕಟಣೆ ಯಾಗುವ ನಿರೀಕ್ಷೆ ಮಾಡಬಹುದಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ಈಗಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.!
ಕಳೆದ ಬಾರಿ ನೋಡುವುದಾದರೆ 10ನೇ ತರಗತಿ ಪರೀಕ್ಷಾ ಫಲಿತಾಂಶ ಮೇ ತಿಂಗಳಿನಲ್ಲಿ ಪ್ರಕಟಣೆಯಾಗಿತ್ತು. ಈ ವರ್ಷವೂ ಕೂಡ 2025 ನೇ ಮೊದಲ ವಾರದಲ್ಲಿ ಪ್ರಕಟಣೆ ಮಾಡುವ ಸಾಧ್ಯತೆ ಇದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ವರ್ಷ ಹಿಂದಿನ ವರ್ಷಕ್ಕಿಂತ ಸ್ವಲ್ಪ ಮುಂಚೆ ಪರೀಕ್ಷೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದಿದೆ.
ಫಲಿತಾಂಶ ಚೆಕ್ ಮಾಡಿಕೊಳ್ಳುವುದು ಹೇಗೆ.?
ವಿದ್ಯಾರ್ಥಿಗಳು 10ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬೇಕೆಂದರೆ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯಮಾಪನ ಮಂಡಳಿಯ ಅಧಿಕೃತ ಜಾಲತಾಣವಾಗಿರುವಂತಹ karresults.nic.in ಮತ್ತು kseab.karnataka.gov.in ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವು 10ನೇ ತರಗತಿ ಫಲಿತಾಂಶವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. ಈ ಮೇಲೆ ನೀಡಿರುವಂತಹ ಜಾಲತಾಣಗಳಲ್ಲಿ 10ನೇ ತರಗತಿ ಫಲಿತಾಂಶವನ್ನು ಕಾಣಬಹುದಾಗಿದೆ.
10ನೇ ತರಗತಿ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ನಲ್ಲಿ ಇರುವಂತಹ ನೋಂದಣಿ ಸಂಖ್ಯೆಯನ್ನು ಮತ್ತು ಜನ್ಮ ದಿನಾಂಕವನ್ನು ಪರೀಕ್ಷೆ ಫಲಿತಾಂಶವನ್ನು ಪರಿಶೀಲಿಸಿಕೊಳ್ಳುವ ಸಮಯದಲ್ಲಿ ನೀಡಬೇಕಾಗುತ್ತದೆ ಎಸ್ ಎಸ್ ಎಲ್ ಸಿ ಫಲಿತಾಂಶದ ಕುರಿತು ನಿಖರವಾದ ಮಾಹಿತಿಯನ್ನು ನೀವು ಪಡೆಯಬೇಕೆಂದರೆ ನಮ್ಮ ಜಾಲತಾಣವನ್ನು ನೋಡಬಹುದಾಗಿದೆ. 10ನೇ ತರಗತಿ ಫಲಿತಾಂಶ ಪ್ರಕಟಣೆಯಾದ ತಕ್ಷಣ ನಮ್ಮ ಹೊಸ ನುಡಿ ಜಾಲತಾಣದಲ್ಲಿ ಪ್ರಕಟಣೆ ಮಾಡಲಾಗುವುದು.