Ration Card: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ಈಗಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.!

Ration Card: ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ತಿಳಿಸುವ ಮಾಹಿತಿ ಏನೆಂದರೆ, ಪಡಿತರ ಚೀಟಿದಾರರು ತಮ್ಮ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಮಾರ್ಚ್ 31 ರವರೆಗೆ ಅವಕಾಶವನ್ನು ನೀಡಲಾಗಿದ್ದು, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ. ಪೂರ್ತಿ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

ರೇಷನ್ ಕಾರ್ಡ್ (Ration Card) ತಿದ್ದುಪಡಿ ಅವಧಿ ವಿಸ್ತರಣೆ: 

ಈ ಮೊದಲು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಜನವರಿ 31ರವರೆಗೆ ನಿಗದಿಯಾಗಿದ್ದ ದಿನಾಂಕವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ ಹೊಸ ಸದಸ್ಯರನ್ನು ಸೇರಿಸುವುದು ಮತ್ತು ಹೆಸರುಗಳನ್ನು ಮತ್ತು ವಿವರಗಳನ್ನು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸುವುದು ಸೇರಿದಂತೆ ವಿವಿಧ ಬದಲಾವಣೆಗಳ ನೀವು ಪಡಿತರ ಚೀಟಿಯಲ್ಲಿ ಮಾಡಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. 

ಪಡಿತರ ಚೀಟಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ನೀವು ಮಾಡಿಸಿಕೊಳ್ಳಬೇಕೆಂದರೆ ನಿಮ್ಮ ಹತ್ತಿರವಿರುವಂತಹ ಗ್ರಾಮ ಒನ್ ಕರ್ನಾಟಕ ಒನ್ ಮತ್ತು ಸೇವಾ ಸಿಂಧೂ ಕೇಂದ್ರಗಳಿಗೆ ಭೇಟಿ ನೀಡಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಆನ್ಲೈನ್ ಮೂಲಕ ಅರ್ಜಿ ಅಥವಾ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ. ಈಗಲೇ ನೀವು ಅವಶ್ಯಕತೆ ಇದ್ದರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. 

ಬೇಕಾಗುವ ದಾಖಲೆಗಳು: 

ನೀವೇನಾದರೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕೆಂದು ಬಯಸಿದರೆ ಈ ಕೆಳಗಿನ ದಾಖಲೆಗಳನ್ನು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವ ಸಂದರ್ಭದಲ್ಲಿ ನೀಡಬೇಕಾಗುತ್ತದೆ. ಹಾಗಾಗಿ ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬ ಮಾಹಿತಿಯನ್ನು ನೀವು ಈ ಕೆಳಗಡೆ ಪಟ್ಟಿ ಮಾಡಿರುವ ಪಟ್ಟಿಯಲ್ಲಿ ಕಾಣಬಹುದಾಗಿದೆ. ಈಗ ಕಲೆಗಳನ್ನು ಕಡ್ಡಾಯವಾಗಿ ನೀವು ರೇಷನ್ ಕಾರ್ಡ್ ತಿದ್ದುಪಡಿಯ ಸಂದರ್ಭದಲ್ಲಿ ನೀಡಬೇಕು. 

  • ಆಧಾರ್ ಕಾರ್ಡ್ 
  • ಆದಾಯ ಪ್ರಮಾಣ ಪತ್ರ 
  • ಆರು ವರ್ಷದ ಮಕ್ಕಳಲ್ಲಿ ಜನನ ಪ್ರಮಾಣ ಪತ್ರ 
  • ಮೊಬೈಲ್ ನಂಬರ್ ಲಿಂಕ್ ಆದ ಆಧಾರ್ ಕಾರ್ಡ್
  • ಮೊಬೈಲ್ ನಂಬರ್ 
  • ವಿದ್ಯುತ್ ಬಿಲ್ 

ಯಾವ ಬದಲಾವಣೆಗಳನ್ನು ಮಾಡಿಸಬಹುದು.?

  • ವಿಳಾಸದ ಬದಲಾವಣೆ ಮಾಡಿಸಬಹುದು 
  • ಕುಟುಂಬದ ಸದಸ್ಯರ ಸೇರ್ಪಡೆ ಅಥವಾ ತೆಗೆದು ಹಾಕಬಹುದು 
  • ಫೋಟೋ ಅಥವಾ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಬಹುದು 
  • ಹೊಸ ಸದಸ್ಯರ ಸೇರ್ಪಡೆ ಮಾಡಿಸಬಹುದು 
  • ಮನೆಯ ಯಜಮಾನರ ಬದಲಾವಣೆ ಮಾಡಿಸಬಹುದು 
  • ನ್ಯಾಯಬೆಲೆ ಅಂಗಡಿಯ ಬದಲಾವಣೆ ಮಾಡಿಸಬಹುದು 

ಮಾರ್ಚ್ 31 ರವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದ್ದು, ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಇರುವಂತಹ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧೂ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಪಡಿತರ ಚೀಟಿದಾರರು ನಿಗದಿತ ಅವಧಿಯೊಳಗೆ ತಿದ್ದುಪಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪ ಇರುವ ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ನೀಡಿ.

WhatsApp Group Join Now
Telegram Group Join Now

2 thoughts on “Ration Card: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ಈಗಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.!”

Leave a Comment