Free LPG Cylinder: ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಕೇಂದ್ರ ಸರ್ಕಾರದಿಂದ ಬಡ ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸುಮಾರು 1.86 ಕೋಟಿ ಮಹಿಳೆಯರಿಗೆ ಉಚಿತ ಎಲ್ ಪಿ ಜಿ ಸಿಲಿಂಡರ್ ವಿತರಣೆ ಮಾಡುವ ನಿರ್ಧಾರವನ್ನು ಸರ್ಕಾರ ಘೋಷಿಸಿರುವುದು ತಿಳಿದುಬಂದಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ!
ಸುಮಾರು 2016ರ ಹೊತ್ತಿಗೆ ಜಾರಿಗೆ ಬಂದಿರುವಂತಹ ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯು ಇದೀಗ ಈ ವರ್ಷ ದೀಪಾವಳಿಗೂ ಮುನ್ನವೇ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಸಿಲಿಂಡರ್ ನೀಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿರುವ ಬಗ್ಗೆ ಮಾಹಿತಿ ಕೊಂಡಿದೆ. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳ ಒಳಗಾಗಿ ಮೊದಲ ಹಂತದಲ್ಲಿ ವಿತರಣೆ ಮಾಡಿದರೆ ಮುಂದಿನ ವರ್ಷ ಎರಡನೇ ಹಂತದಲ್ಲಿ ವಿತರಣೆ ಮಾಡುವಂತಹ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದು ಬಂದಿದೆ.
ಸಬ್ಸಿಡಿ ಹಣ ಹೇಗೆ ದೊರಕುತ್ತದೆ?
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗೆ ಸಬ್ಸಿಡಿಯ ಹಣ ದೊರಕುತ್ತದೆ ಎಂದು ತಿಳಿದುಬಂದಿದೆ. ಪ್ರತಿ ತಿಂಗಳು ಕೂಡ ಸಿಲಿಂಡರ್ ಖರೀದಿಸುವಂತಹ ಮಹಿಳೆಯರಿಗೆ ಈ ಸಬ್ಸಿಡಿಯ ಹಣ ಅನ್ವಯವಾಗುತ್ತದೆ.
ಇಂಧನದ ಬೆಲೆಗಳು ಏರಿಕೆಯಾಗುತ್ತಿರುವ ಕಾರಣದಿಂದಾಗಿ ಸರ್ಕಾರವು ಜನರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಇಂಧನಗಳ ಬಳಕೆ ಮಾಡುವುದನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ಹಮ್ಮಿಕೊಂಡಿರುತ್ತದೆ. ಇದರಿಂದ ಹಲವಾರು ಕೋಟ್ಯಂತರ ಬಡ ಕುಟುಂಬಗಳಿಗೆ ಪ್ರಯೋಜನ ದೊರಕಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಆಧಾರ್ ಕಾರ್ಡ್
- ವಿಳಾಸದ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ರೇಷನ್ ಕಾರ್ಡ್ ವಿವರಗಳು
- ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
ಈ ಕೆಳಗೆ ನೀಡಿರುವಂತಹ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಎಲ್ ಪಿ ಜಿ ಸಿಲೆಂಡರ್ ಪಡೆಯಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ಬೇಕಾಗುವಂತಹ ಅಧಿಕೃತ ಜಾಲತಾಣದ ಲಿಂಕ್ ಈ ಕೆಳಗಡೆ ನೀಡಲಾಗಿದೆ ನೋಡಿ.
ಅರ್ಜಿ ಲಿಂಕ್: https://pmuy.gov.in/
ಮೇಲೆ ನೀಡಿರುವಂತಹ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಗತ್ಯವಾಗಿರುವ ದಾಖಲೆಗಳನ್ನು ಒದಗಿಸಿದ ನಂತರ ಈ ಯೋಜನೆಗೆ ಬಡ ಕುಟುಂಬಗಳು ಅರ್ಜಿ ಸಲ್ಲಿಸಲು ಅವಕಾಶವನ್ನು ಪಡೆದಿರುತ್ತೀರಿ.