NEET UG 2025 ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ಬಾರಿಯ ಪದವಿಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಜೂನ್ 14ರೊಳಗೆ ಅಧಿಕೃತವಾಗಿ ಪ್ರಕಟಿಸಲಿದೆ. ಈ ಬಾರಿಯ ಪರೀಕ್ಷೆ 2025ರ ಮೇ 4 ರಂದು ದೇಶದಾದ್ಯಾಂತ ಸುಮಾರು 500ಕ್ಕೂ ಹೆಚ್ಚು ನಗರಗಳಲ್ಲಿ 5,453 ಪರೀಕ್ಷಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯಿತು. ಈ ಸಲ ಸರಿಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು ಎಂಬ ಮಾಹಿತಿಯು ತಿಳಿದು ಬಂದಿರುತ್ತದೆ.
ಈ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ (ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ) ವಿಷಯಗಳಲ್ಲಿ 180 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿತ್ತು. ವಿದ್ಯಾರ್ಥಿಗಳು ತಮ್ಮ ನೈಜ ಅಂಕಗಳ ಬಗ್ಗೆ ಸ್ಪಷ್ಟತೆಯನ್ನು ಪಡೆಯಲು ಅಂತಿಮ ಉತ್ತರ ಕೀ ಬಹು ನಿರೀಕ್ಷಿತವಾಗಿದೆ. ಈ ಪರೀಕ್ಷೆಯ ಉತ್ತರ ಕೀ ಫಲಿತಾಂಶ ಪ್ರಕಟಣೆಯ ಮುಂಚಿತವಾಗಿಯೇ ನೀವು ಅಧಿಕೃತ ವೆಬ್ಸೈಟ್ನಲ್ಲಿ ಕಾಣಬಹುದಾಗಿರುತ್ತದೆ. ಅಂತಿಮ ಉತ್ತರ ಕೀ ಬಿಡುಗಡೆ ನಂತರ, ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಿ ಅಂಕಗಳ ಲೆಕ್ಕಾಚಾರ ಮಾಡಿಕೊಳ್ಳಬಹುದು.
NEET UG Result 2025
ಫಲಿತಾಂಶದೊಂದಿಗೆ NEET UG 2025 ರ ಕಟ್-ಆಫ್ ಅಂಕಗಳು ಸಹ ಪ್ರಕಟವಾಗಲಿವೆ. ಕಳೆದ ವರ್ಷ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ MBBS ಪ್ರವೇಶಕ್ಕಾಗಿ 50% ಶೇಕಡಾವಾರು ಕಟ್-ಆಫ್ ಇತ್ತು. OBC, SC, ಮತ್ತು ST ಅಭ್ಯರ್ಥಿಗಳಿಗೆ ಇದು 40% ಇತ್ತು. ಈ ಬಾರಿಯೂ ಹೋಲಿಕೆಗೆ ತಕ್ಕಂತೆ ಶೇಕಡಾವಾರು ನಿರ್ಧರಿಸಲಾಗುವುದು. ಅತ್ಯಧಿಕ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳ ಆಧಾರದ ಮೇಲೆ ಅಖಿಲ ಭಾರತ ಸಾಮಾನ್ಯ ಮೆರಿಟ್ ಪಟ್ಟಿ (All India Rank List) ಪ್ರಕಟಿಸಲಾಗುವುದು.
ಅಭ್ಯರ್ಥಿಗಳು ತಮ್ಮ ಫಲಿತಾಂಶ ಹಾಗೂ ಸ್ಕೋರ್ ಕಾರ್ಡ್ ಅನ್ನು ಅಧಿಕೃತ ವೆಬ್ಸೈಟ್ನಲ್ಲಿ ತಮ್ಮ ನೋಂದಣಿ ಸಂಖ್ಯೆ ಅಥವಾ ಅಪ್ಲಿಕೇಶನ್ ಐಡಿ ಬಳಸಿ ಡೌನ್ಲೋಡ್ ಮಾಡಬಹುದು. ಜೊತೆಗೆ, ಮೆರಿಟ್ ಪಟ್ಟಿಯ ವಿವರಗಳು, ಕೌನ್ಸೆಲಿಂಗ್ ಪ್ರಕ್ರಿಯೆ ಹಾಗೂ ರಾಜ್ಯ ಮತ್ತು ಎಐಕ್ಯೂ (All India Quota) ಪ್ರಭೇದದ ಪ್ರವೇಶ ವಿವರಗಳು ಪ್ರಕಟವಾಗುತ್ತವೆ.
NEET UG ಫಲಿತಾಂಶ 2025 ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಿರ್ಧಾರ ಮಾಡುವ ಮಹತ್ವದ ಹಂತವಾಗಿದೆ. ಫಲಿತಾಂಶ ಪ್ರಕಟವಾದ ಬಳಿಕ, ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣ ಆಯ್ಕೆಗಳಿಗೆ ತಯಾರಿ ಆರಂಭಿಸಬಹುದು. ಫಲಿತಾಂಶವನ್ನು ತಿಳಿಯಲು ಮತ್ತು ಡೌನ್ಲೋಡ್ ಮಾಡಲು neet.nta.nic.in ಅಥವಾ ntaresults.nic.in ಗೆ ಭೇಟಿ ನೀಡಬೇಕು. ಈ ವೆಬ್ಸೈಟ್ಗಳಲ್ಲಿ ಲಭ್ಯವಿರುವ ಅಧಿಕೃತ ಲಿಂಕ್ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.