Health Care: ರೂ.5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತೆ.! ಆಯುಷ್ಮಾನ್ ಭಾರತ್ ಯೋಜನೆ.!

Health Care: ರೂ.5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತೆ.! ಆಯುಷ್ಮಾನ್ ಭಾರತ್ ಯೋಜನೆ.!

ಆಯುಷ್ಮಾನ್ ಭಾರತ್ ಯೋಜನೆ ಮೂಲಕ ದೇಶದ ನಾಗರಿಕರು ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯುವ ಅವಕಾಶವನ್ನು ಪಡೆಯಬಹುದಾಗಿದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಇದರ ಸಂಪೂರ್ಣ ಪ್ರಕ್ರಿಯೆ ಯಾವ ರೀತಿಯಾಗಿದೆ ಎಂಬ ಪೂರ್ತಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯುತ್ತೀರಾ.!

Also Read: BOB Personal loan: ಬ್ಯಾಂಕ್ ಆಫ್ ಬರೋಡದಲ್ಲಿ 20 ಲಕ್ಷದವರೆಗೆ ಸುಲಭವಾಗಿ ವೈಯಕ್ತಿಕ ಸಾಲ ಸಿಗುತ್ತೆ.!

ನಮಸ್ಕಾರ ಸ್ನೇಹಿತರೆ ಪ್ರಧಾನಮಂತ್ರಿಯವರು ಜಾರಿಗೆ ತಂದಿರುವಂತಹ ಈ ಯೋಜನೆಯಿಂದ ಅರ್ಹರಿರುವಂತಹ ಕುಟುಂಬದ ಸದಸ್ಯರು ಈ ಯೋಜನೆಯ ಮೂಲಕ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯುತ್ತೀರಾ ಒಂದು ರೂಪಾಯಿಯ ಖರ್ಚು ಇಲ್ಲದೆ ಕೂಡ ಈ ಚಿಕಿತ್ಸೆ ನಿಮಗೆ ದೊರಕುತ್ತದೆ.

ಈ ಯೋಜನೆಯ ಉದ್ದೇಶವೇನು.?

ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ನಿರ್ಗತಿಕರು ಹಾಗೂ ಬಡ ಕುಟುಂಬದವರು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಖರ್ಚಿಲ್ಲದೆ ಪಡೆಯುವಂತಹ ಸೌಲಭ್ಯವನ್ನು ಒದಗಿಸಿ ಕೊಡುವುದಾಗಿದೆ. ಹಾಗೂ ತಮ್ಮ ರೋಗಗಳಿಗೆ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಇರುವಂತಹ ಬಡವರಿಗೆ ಇದು ನೆರವಾಗಲಿದೆ.

Health Care
Image Credit to The Original Source

 

ಆಯುಷ್ಮಾನ್ ಕಾರ್ಡ್ ಪ್ರತಿ ವರ್ಷಕ್ಕೆ ಕುಟುಂಬದ ಸದಸ್ಯರಿಗೆ 5 ಲಕ್ಷದವರೆಗೆ ನಗದು ರಹಿತ ಆರೋಗ್ಯ ವಿಮೆಯನ್ನು ಒದಗಿಸುತ್ತದೆ. ಆಸ್ಪತ್ರೆಗೆ ದಾಖಲಾಗುವಂತಹ ರೋಗಿಯು ಯಾವುದೇ ರೀತಿಯ ಹಣವನ್ನು ಪಾವತಿಸುವ ಅವಶ್ಯಕತೆಯೂ ಇರುವುದಿಲ್ಲ.

ಎಲ್ಲಾ ವೆಚ್ಚವನ್ನು ಸರ್ಕಾರವೇ ಖುದ್ದಾಗಿ ಆಸ್ಪತ್ರೆಗೆ ಒದಗಿಸುತ್ತದೆ. ಈ ಆಯುಷ್ಮಾನ್ ಕಾರ್ಡ್ ದೇಶದಾದ್ಯಂತ ಪೋರ್ಟೆಬಲ್ ಆಗಿದ್ದು, ಯಾವುದೇ ರಾಜ್ಯದ ಎಂಪನೆಲ್ಡ್ ಆಸ್ಪತ್ರೆಯಲ್ಲಿ ಬಳಸಬಹುದಾಗಿದೆ. ಕುಟುಂಬದ ಸದಸ್ಯರ ಸಂಖ್ಯೆ ಹಾಗೂ ವಯಸ್ಸಿನ ಮಿತಿಯಲ್ಲಿ ಯಾವುದೇ ಅಡೆತಡೆಗಳಿಲ್ಲ.

ಇದಕ್ಕೆ ಅರ್ಹತೆ ಹೊಂದಿರುವವರು ಯಾರು.?

ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಬಡ ಪರಿಸ್ಥಿತಿಯಲ್ಲಿರುವಂತಹ ಜನರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು, ಯಾರು ಚಿಕಿತ್ಸೆ ಪಡೆಯಲು ಹಣವಿಲ್ಲದೆ ಪರದಾಡುತ್ತಿರುವವರು.

ಹಾಗೂ ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು ಆಟೋ ಚಾಲಕರು, ಟೈಲರ್ಗಳು ಪ್ಲಮ್ಬರ್ಗಳು ಇನ್ನಿತರ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ತಮ್ಮ ಜೀವನವನ್ನು ನಿರ್ವಹಿಸುತ್ತಿರುವಂತಹ ಬಡ ಜನರಿಗೆ ಈ ಯೋಜನೆಯ ಸೂಕ್ತ.

ಅರ್ಜಿ ಸಲ್ಲಿಸುವುದು ಹೇಗೆ.?

ನೀವೇನಾದರೂ ಈ ಆಯುಷ್ಮಾನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಈ ಕೆಳಗೆ ನೀಡಿರುವಂತಹ ಅಧಿಕೃತ ಜಾಲತಾಣದ ಲಿಂಕ್ ಬಳಸಿ ಈ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್: ಅಪ್ಲೈ ಮಾಡಿ.!

ಮೊಬೈಲ್ ನಂಬರ್ ಬಳಸಿ ಹಾಗೂ ಒಟಿಪಿಯನ್ನು ಬಳಸಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಆಧಾರ್ ಕಾರ್ಡ್ ಕೆವೈಸಿ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಹಾಗೂ ನಿಮ್ಮ ಹತ್ತಿರ ಇರುವಂತ ಸಿಎಸ್‌ಸಿ ನಾಗರಿಕ ಸೇವ ಕೇಂದ್ರಗಳು ಹಾಗೂ ಗ್ರಾಮವನ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಸುಲಭವಾಗಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.

Leave a Comment