Gruhalakshmi Scheme: ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಬಿಡುಗಡೆ ಪ್ರಾರಂಭ.!

ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಬಿಡುಗಡೆಯಾಗಿದೆ.! ನಿಮ್ಮ ಖಾತೆಗೆ ಹಣ ಬಂದಿದೆಯ ಚೆಕ್ ಮಾಡಿಕೊಳ್ಳಿ.!

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಅಂತಹ ಈ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಜನಪ್ರಿಯವಾಗಿದ್ದು ಮಹಿಳೆಯರಿಗೆ ಪ್ರತಿ ತಿಂಗಳು ಕೂಡ ಎರಡು ಸಾವಿರ ರೂಪಾಯಿಯನ್ನು ನೀಡುವ ಮೂಲಕ ಇಲ್ಲಿಯವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಸರ್ಕಾರದ ಯಶಸ್ವಿ ಯೋಜನೆಯಾಗಿ ಹೊರಹೊಮ್ಮುತ್ತಿದೆ.

Also Read: ಕೆನರಾ ಬ್ಯಾಂಕ್‌ನಿಂದ ₹10 ಲಕ್ಷವರೆಗೆ ವೈಯಕ್ತಿಕ ಸಾಲ ಸಿಗುತ್ತೆ.!

ಇದೇ ತಿಂಗಳು ಅಂದರೆ ಆಗಸ್ಟ್ 2026 ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣವು ಮಹಿಳೆಯರ ಖಾತೆಗೆ ಕೆಲವೊಂದು ಜಿಲ್ಲೆಯಲ್ಲಿ ಖಾತೆಗಳಿಗೆ ಜಮಾ ಆಗಲು ಪ್ರಾರಂಭವಾಗಿದ್ದು, ಉಳಿದ ಹಲವೆಡೆ ತಾಂತ್ರಿಕ ಪರಿಶೀಲನೆಗಳ ಕಾರ್ಯ ಜರುಗುತ್ತಿದೆ.

ಹಣ ಜಮಾ ಆಗದಿರಲು ಕಾರಣಗಳು.!

ಗೃಹಲಕ್ಷ್ಮಿ ಯೋಜನೆಯ ಹಣವು ಮಹಿಳೆಯರ ಖಾತೆಗೆ ತಲುಪಲು ಯಾವುದೇ ಅಡೆತಡೆಗಳೆಲ್ಲ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಹಣ ಬರದೆ ಇರಬಹುದು.

Gruhalakshmi Scheme
Image Credit to Original Source

 

ಉದಾಹರಣೆಗೆ ಫಲಾನುಭವಿಯ ಖಾತೆಗೆ NPCI ಮ್ಯಾಪಿಂಗ್ ಲಭ್ಯವಿರುವುದಿಲ್ಲ, ಆದ್ದರಿಂದ ಫಲಾನುಭವಿಗಳ ಖಾತೆಗೆ ಹಣ ತಲುಪುವುದು ವಿಳಂಬವಾಗಿರಬಹುದು. ಪ್ರಮುಖವಾಗಿ ಕೆವೈಸಿ ನವೀಕರಣ ಆಗದೆ ಇರುವುದರಿಂದ ಕೂಡ ಹಣ ಜಮಾ ಆಗದೇ ಇರಬಹುದು.

ಹಣದ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ.?

ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಪಡೆಯುವ ಮೂಲಕ ಅದರಲ್ಲಿ ಫಲಾನುಭವಿಯ ಪೂರ್ತಿ ವಿವರವನ್ನು ಹಾಕಿ ಆಧಾರ್ ಕಾರ್ಡ್ಗೆ ಬರುವಂತಹ ಓಟಿಪಿ ನಮೂದಿಸಿ ಫಲಾನುಭವಿಯ ಡಿ ಬಿ ಟಿ ವಿವರಗಳನ್ನು ಪರಿಶೀಲಿಸಬಹುದಾಗಿರುತ್ತದೆ. ಅದರಲ್ಲಿ ಯಾವ ದಿನಾಂಕದಂದು ಎಷ್ಟು ಹಣ ಜಮಾ ಆಗಿರುತ್ತದೆ ಎಂಬ ಮಾಹಿತಿ ದೊರೆಯುತ್ತದೆ.

ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದನ್ನು ಕೆಲವೊಂದು ಸಲ ಪರಿಶೀಲಿಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಪ್ರತಿಯೊಂದು ವಿವರಗಳು ಕೂಡ ಸರಿಯಾಗಿದ್ದಾಗ ಗೃಹಲಕ್ಷ್ಮಿ ಯೋಜನೆಯ ಹಣವು ಮಹಿಳೆಯರ ಖಾತೆಗೆ ಸಲೀಸಾಗಿ ತಲುಪುತ್ತದೆ.

Leave a Comment