SSLC Result Out Now: ಎಸ್ಎಸ್ಎಲ್ಸಿ ರಿಸಲ್ಟ್ ಪ್ರಕಟಣೆ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ!
10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಏಕೆಂದರೆ, ಹತ್ತನೇ ತರಗತಿ ಫಲಿತಾಂಶ ಇವತ್ತು ಪ್ರಕಟಣೆ ಆಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿದ್ದು, ಹಲವಾರು ವಿದ್ಯಾರ್ಥಿಗಳು ತಮ್ಮ 10ನೇ ತರಗತಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಕಾತುರದಲ್ಲಿದ್ದಾರೆ.
ತಿಳಿದು ಬಂದಿರುವ ಮಾಹಿತಿಯ ಪ್ರಕಾರ 10ನೇ ತರಗತಿ ಫಲಿತಾಂಶ ಇವತ್ತೆ ಅಂದರೆ ಮೇ 2ನೇ ತಾರೀಕು 11 ಗಂಟೆಯ ಮೇಲೆ ಬಿಡುಗಡೆ ಆಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿರುತ್ತದೆ. ನೀವು ಈ ಫಲಿತಾಂಶವನ್ನು karresults.nic.in ನಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.
ಈ ಹಿಂದೆ ನಡೆದಿರುವಂತಹ 10ನೇ ತರಗತಿ ಪರೀಕ್ಷೆ ಒಂದರ ಫಲಿತಾಂಶ ಇವತ್ತು ಬಿಡುಗಡೆ ಆಗುತ್ತದೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದು. ಇವತ್ತೆ ರಿಸಲ್ಟ್ ಬಿಡುಗಡೆ ಆಗುವುದು ಬಹುತೇಕ ಖಚಿತ ಆಗಿರುತ್ತದೆ. 11:30 ನಿಮಿಷದ ಮೇಲೆ 10ನೇ ತರಗತಿ ಫಲಿತಾಂಶ ಬಿಡುಗಡೆ ಆಗುವುದನ್ನು ನಿರೀಕ್ಷಿಸಬಹುದಾಗಿದೆ.
ಕಳೆದ ವರ್ಷವೂ ಕೂಡ ಇದೆ ತಿಂಗಳು ಮೇ 10ನೇ ತಾರೀಖಿನಂದು ಬಿಡುಗಡೆ ಆಗಿತ್ತು. ಈ ಸಲವೂ ಕೂಡ ಇದೇ ಸಂದರ್ಭದಲ್ಲಿ ಅಂದರೆ ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಂಭವವಿದೆ. ಇವತ್ತೆ 10ನೇ ತರಗತಿ ಫಲಿತಾಂಶ ಬಿಡುಗಡೆ ಆಗುತ್ತದೆ ಎಂಬ ಅಧಿ ಸೂಚನೆಯನ್ನು ನೀವು ಕಾಣಬಹುದು.
ರಿಸಲ್ಟ್ ಚೆಕ್ ಮಾಡುವುದು ಹೇಗೆ?
- ಮೊದಲು ನೀವು ಈ http://karresults.nic.in ವೆಬ್ಸೈಟ್ ಅನ್ನು ಭೇಟಿ ನೀಡಬೇಕಾಗುತ್ತದೆ.
- ನಂತರ ಅದರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದ ಕೆಳಗಡೆ ಎಸ್ ಎಸ್ ಎಲ್ ಸಿ ರಿಸಲ್ಟ್ ಅನೌನ್ಸ್ ಆಗಿರುವಂತಹ ಲಿಂಕ್ ಕಾಣಿಸುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಆಪ್ಷನ್ ಕಾಣಿಸುತ್ತದೆ.
- ಜನ್ಮ ದಿನಾಂಕ ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಹತ್ತನೇ ತರಗತಿ ಫಲಿತಾಂಶ ಗೋಚರವಾಗುತ್ತದೆ.