ವಿದ್ಯಾರ್ಥಿಗಳಿಗೆ ಉಚಿತವಾಗಿ ರೂಪಾಯಿ ₹1,25,000‌ ರವರೆಗೆ ಸ್ಕಾಲರ್ಶಿಪ್! ಅಪ್ಲೈ ಮಾಡುವ ವಿಧಾನ ಇಲ್ಲಿದೆ ನೋಡಿ!

PM yashasvi scholarship 2024: ಪ್ರಧಾನಮಂತ್ರಿ ಯಶಸ್ವಿ ಸ್ಕಾಲರ್ಶಿಪ್

ನಮಸ್ಕಾರ ಗೆಳೆಯರೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ನ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಇವತ್ತಿನ ಈ ಒಂದು ಲೇಖನಕ್ಕೆ ನಾಡಿನ ಸಮಸ್ತ ಜನತೆಗೆ ಸ್ವಾಗತ ಸುಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮುಖಾಂತರ ನಾಡಿನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ತಿಳಿಸಲು ಬಯಸುವ ವಿಷಯವೆಂದರೆ ಕೇಂದ್ರ ಸರ್ಕಾರವು ಒಂದು ಹೊಸ ಸ್ಕಾಲರ್ಷಿಪ್ಪನ್ನು ಬಿಡುಗಡೆ ಮಾಡಿದ್ದು ಈ ಸ್ಕಾಲರ್ಶಿಪ್ ನ ಅನ್ವಯ ದೇಶದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಗಳಿಂದ ರೂ.1,25,000 ವರೆಗೆ ಉಚಿತ ವಿದ್ಯಾರ್ಥಿ ವೇತನ.

ಈ ವಿದ್ಯಾರ್ಥಿ ವೇತನವನ್ನು ನೀವು ಪಡೆಯುವುದೇಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಮತ್ತು ನೀವು ಈ ಒಂದು ಸ್ಕಾಲರ್ಶಿಪ್ ಅನ್ನು ಪಡೆಯಲು ಮಾಡಬೇಕಾದ ಕಾರ್ಯವೇನು? ಮತ್ತು ಯಾವ ಯಾವ ವಿದ್ಯಾರ್ಥಿಗಳಿಗೆ ಎಷ್ಟೆಷ್ಟು ಸ್ಕಾಲರ್ಶಿಪ್ ಸಿಗಲಿದೆ ಎಂಬುದರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆವರ್ಗು ಎಚ್ಚರಿಕೆಯಿಂದ ಗಮನವಿಟ್ಟು ಓದಿ.

ಅಂದಾಗ ಮಾತ್ರ ನಿಮಗೆ ಪ್ರಧಾನಮಂತ್ರಿ ಯಶಸ್ವಿ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸೋವಿಸ್ತರವಾದ ಮಾಹಿತಿ ತಿಳಿಯುತ್ತದೆ ಮತ್ತು ಈ ಒಂದು ಸ್ಕಾಲರ್ಶಿಪ್ ಅನ್ನು ನೀವು ಪಡೆಯುವುದು ಹೇಗೆ ಎಂಬುದರ ಬಗ್ಗೆ ಕೂಡ ನಿಮಗೆ ಒಂದು ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ನಿಮಗೆ ದೊರಕುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆಯ ತನಕ ಓದಿ.

ಪ್ರಧಾನಮಂತ್ರಿ ಯಶಸ್ವಿ ವಿದ್ಯಾರ್ಥಿ ವೇತನ

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಕುಟುಂಬದ ಆರ್ಥಿಕ ಸಮಸ್ಯೆಯಿಂದ ವಂಚಿತವಾಗುತ್ತಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಹಾರ್ದಿಕ ನೆರವು ನೀಡಲೆಂದು ಪ್ರಧಾನಮಂತ್ರಿ ಯಶಸ್ವಿ ವಿದ್ಯಾರ್ಥಿ ವೇತನ ಎಂಬ ಒಂದು ಹೊಸ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು ಈ ಒಂದು ವಿದ್ಯಾರ್ಥಿ ವೇತನದ ಅನ್ವಯ ದೇಶದ ಎಲ್ಲಾ ಮಕ್ಕಳಿಗೆ ಅಂದರೆ ಈ ಒಂದು ಸ್ಕಾಲರ್ಶಿಪ್ ಗೆ ಆಯ್ಕೆ ಆಗುವಂತಹ ಮಕ್ಕಳಿಗೆ 75,000 ಗಳಿಂದ ರೂ.1,25,000ಗಳವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.

ವಿದ್ಯಾರ್ಥಿ ವೇತನಕ್ಕೆ ಇರಬೇಕಾದ ಅರ್ಹತೆಗಳೇನು? ಹಾಗೂ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇರಬೇಕಾದ ದಾಖಲಾತಿಗಳು ಯಾವ್ಯಾವು ಮತ್ತು ಇಸ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ನೋಡಿ.

ಈ ಸ್ಕಾಲರ್ಶಿಪ್ ಗೆ ಅರ್ಹತೆ

ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ವೇತನ ಯೋಜನೆಯ ಮೂಲಕ ಭಾರತ ಸರ್ಕಾರವು ್‌ಟಿಎಸ್‌ಸಿ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಂಗವಿಕಲ ವರ್ಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಒಂದು ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. ವಿದ್ಯಾರ್ಥಿ ವೇತನವನ್ನು ಭಾರತದಲ್ಲಿ ಕೇವಲ 15 ಸಾವಿರ ವಿದ್ಯಾರ್ಥಿಗಳು ಮಾತ್ರ ಪಡೆಯಬಹುದಾಗಿದೆ. ಇಸ್ಕಾಲರ್ಶಿಪ್ಗೆ ಪ್ರತಿ ವರ್ಷ 383 ಪಾಯಿಂಟ್ 65 ಕೋಟಿಗಳ ಸಹಾಯಧನವನ್ನು ನೀಡುತ್ತಾ ಬಂದಿದೆ ಕೇಂದ್ರ ಸರಕಾರ

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಭಾರತದ ಕಾಯಂ ಪ್ರಜೆ ಆಗಿರಬೇಕು ಮತ್ತು ನಿವಾಸಿ ಆಗಿರಬೇಕು.
ಹಿಂದುಳಿದ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್ಶಿಪ್ ಸಿಗುತ್ತದೆ.
ಇದೇ ವರ್ಷ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು 2022-2024 ರಲ್ಲಿ ಹತ್ತನೇ ಮತ್ತು ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ಎರಡುವರೆ ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು 9ನೇ ತರಗತಿಗೆ ‌01/04/2007 ರಿಂದ 31/03/2011 ಇವುಗಳ ನಡುವೆ ಮತ್ತು 11ನೇ ತರಗತಿಗೆ 01/04/2005 ರಿಂದ 31/03/2009 ರ ನಡುವೆ ಜನಿಸಿದ ವಿದ್ಯಾರ್ಥಿಗಳು ಮಾತ್ರ ಈ ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವ ವಿಧಾನ

ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ಕೆಳಗಿನ ವಿಧಾನಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

  • ಮೊದಲಿಗೆ ನಾವು ಕೆಳಗಡೆ ಅರ್ಜಿ ಸಲ್ಲಿಸಲು ಪ್ರಧಾನಮಂತ್ರಿಯ ಯಶಸ್ವಿ ಸ್ಕಾಲರ್ಶಿಪ್ ಯೋಜನೆಯ ಅಧಿಕೃತ ವೆಬ್ಸೈಟ್ನ ಲಿಂಕ್ ನೀಡಿರುತ್ತೇವೆ.
  • ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ನಿಮ್ಮ ಇನ್ನಿತರ ಡೀಟೇಲ್ಸ್ ಅನ್ನು ಭರ್ತಿ ಮಾಡಿ ನೊಂದಾಯಿಸಿ
  • ನೋಂದಾಯಿಸಿದ ಮೇಲೆ ಅರ್ಜಿ ಸಲ್ಲಿಸಲು ಅಪ್ಲೈ ನೌ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ಕೇಳುವಂತಹ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
  • ಅದಾದ ಮೇಲೆ ನೀವು ಈ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ
  • ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿ ಸಲ್ಲಿಸಿರುವಂತಹ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

ಆಯ್ಕೆ ವಿಧಾನ

ಈ ಒಂದು ಸ್ಕಾಲರ್ಶಿಪ್ ಪಡೆಯಲು ಮಾದರಿ ಪರೀಕ್ಷೆಯನ್ನು ಏರ್ಪಡಿಸಲಾಗಿದ್ದು ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಂತಹ 15 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಆ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ಅನ್ನು ನೀಡಲಾಗುವುದು.

ಪ್ರವೇಶ ಪರೀಕ್ಷೆ ಮಾದರಿ

ಈ ವಿದ್ಯಾರ್ಥಿ ವೇತನದ ಪರೀಕ್ಷೆಯು ಪೆನ್ ಮತ್ತು ಪೇಪರ್ ನೊಂದಿಗೆ ಭೌತಿಕ ಮಾಧ್ಯಮದ ಮೂಲಕ ಓ ಎಂ ಆರ್ ಸೀಟ್ ಅನ್ನು ಆಧರಿಸಿ ನಡೆಸುವಂತಹ ಪರೀಕ್ಷೆಯಾಗಿದೆ. ಇದಕ್ಕಾಗಿ ಒಟ್ಟು ನೂರು ಬಹು ಆಯ್ಕೆ ಪ್ರಶ್ನೆಗಳನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಕೇಳಲಾಗುವುದು. ಈ ಪರೀಕ್ಷೆ ಬರೆಯಲು 150 ನಿಮಿಷಗಳ ಕಾಲ ಕಾಲಾವಧಿ ನೀಡಲಾಗುವುದು.

ಪ್ರಧಾನಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ಕಾಣುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ

PM Yashasvi scholarship

ಪ್ರಿಯ ವಿದ್ಯಾರ್ಥಿಗಳೇ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಯೋಜನೆಗೆ ನಡೆಸುವಂತಹ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿಗಳೇ ಗಮನಿಸಿ

ಪ್ರಿಯ ವಿದ್ಯಾರ್ಥಿಗಳೇ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಸರಕಾರದ ಹೊಸ ಯೋಜನೆಗಳು ಮತ್ತು ಸರಕಾರದ ಹೊಸ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವಿಲ್ಲಿ ನೋಡಬಹುದು. ನೀವು ಈ ಮಾಧ್ಯಮದಲ್ಲಿ ಪೋಸ್ಟ್ ಮಾಡುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ತಕ್ಷಣವೇ ಈ ಮಾಧ್ಯಮದ ಚಂದದಾರರಾಗಿ. ಧನ್ಯವಾದಗಳು ಸಿಗೋಣ ಮುಂದಿನ ಹೊಸ ಲೇಖನದಲ್ಲಿ.