Indian Post Office Recruitment 2024: ಭಾರತೀಯ ಅಂಚೆ ಕಚೇರಿ ಇಲಾಖೆ ನೇಮಕಾತಿ
ನಮಸ್ಕಾರ ಸ್ನೇಹಿತರೆ, ಭಾರತೀಯ ಅಂಚೆ ಕಚೇರಿ ಇಲಾಖೆ ಹುದ್ದೆಗಳ ವಿವರ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಆದರಣಿಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಭಾರತೀಯ ಅಂಚೆ ಕಚೇರಿಯಲ್ಲಿ ಹಲವಾರು ಹುದ್ದೆಗಳು ಖಾಲಿದು ಈ ಹುದ್ದೆಗಳ ಬರ್ತಿಗೆ ಪೋಸ್ಟ್ ಆಫೀಸ್ ಅರ್ಜಿಗಳ ಆಹ್ವಾನ ನೀಡಿದೆ. ಆದಕಾರಣ ಈ ಹುದ್ದೆಗಳಲ್ಲಿ ಆಸಕ್ತಿಯನ್ನು ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ. ನಾವು ಇವತ್ತಿನ ಈ ಲೇಖನದಲ್ಲಿ ಭಾರತೀಯ ಅಂಚೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಏನಿರಬೇಕು ವಯಸ್ಸಿನ ಮಿತಿ ಎಷ್ಟರಬೇಕು ಮತ್ತು ಈ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಸಿಗುವ ಸಂಬಳವೆಷ್ಟು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೆಕ್ಕದಲ್ಲಿ ನಿಮಗೆ ನೀಡಿದ್ದೇವೆ ಆದಕಾರಣ ಈ ಲೇಖನವನ್ನು ಕೊನೆವರೆಗೂ ಓದಿ.
ಖಾಲಿ ಇರುವ ಹುದ್ದೆಗಳು
- ಸಿಬ್ಬಂದಿ ಕಾರ್ ಡ್ರೈವರ್
- ಒಟ್ಟು 27 ಹುದ್ದೆಗಳು ಖಾಲಿ
ಶೈಕ್ಷಣಿಕ ಅರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಮಾನ್ಯತೆಯನ್ನು ಪಡೆದಿರುವ ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ 10ನೇ ತರಗತಿಯನ್ನು ಪಾಸ್ ಆಗಿದ್ದರೆ ಸಾಕು.
ವೇತನದ ಮಾಹಿತಿ
ಭಾರತೀಯ ಅಂಚೆ ಕಚೇರಿಯ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು 19000 ಗಳಿಂದ 60 ಸಾವಿರ ರೂಪಾಯಿಗಳವರೆಗೆ ಒಂದು ತಿಂಗಳ ಮಾಸಿಕ ವೇತನವನ್ನು ನೀಡಲಾಗುವುದೆಂದು ಭಾರತೀಯ ಅಂಚಿ ಇಲಾಖೆ ತಿಳಿಸಿದೆ.
ವಯಸ್ಸಿನ ಮಿತಿ
ಭಾರತೀಯ ಅಂಚೆ ಕಛೇರಿ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮೇ 2024ಕ್ಕೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 27 ವರ್ಷದ ಒಳಗಿನ ಯಾವುದೇ ಒಬ್ಬ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದಾಗಿದೆ.
ಉದ್ಯೋಗ ಸ್ಥಳ
- ಅಖಿಲ ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ
ಗೆಳೆಯರೇ ನೀವು ಈ ಒಂದು ಹುದ್ದೆಗಳಿಗೆ ನಿಮ್ಮ ಮೊಬೈಲ್ ಮುಖಾಂತರ ಆನ್ಲೈನ್ನ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದರೆ ಮೊಬೈಲ್ನಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಅಥವಾ ಲಿಂಕ್ ಓಪನ್ ಆಗದೇ ಇರುವ ಕಾರಣ ನಿಮಗೆ ಅರ್ಜಿ ಸಲ್ಲಿಸಲು ತೊಂದರೆ ಆಗಬಹುದು ಆದ ಕಾರಣ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿದ ಮೂಲಕ ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಈ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಭಾರತೀಯ ಅಂಚೆ ಕಚೇರಿ ಇಲಾಖೆ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾದರೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೂಲಕ ಭಾರತೀಯ ಅಂಚೆ ಕಚೇರಿ ಇಲಾಖೆಯ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 08/04/2024 ರಂದು ಅರ್ಜಿಗಳು ಆರಂಭವಾಗಿವೆ
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/05/2024 ಆಗಿರುತ್ತದೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಎಲ್ಲಾ ಅಭ್ಯರ್ಥಿಗಳಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್
ಓದುಗರೆ ಗಮನಿಸಿ
ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ನೀವು ಪ್ರತಿನಿತ್ಯ ಓದಬೇಕಾದರೆ ನಮ್ಮ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬಿಡುವಂತಹ ಯಾವುದೇ ಪೋಸ್ಟ್ ಬಂದು ನಿಮಗೆ ತಲುಪುತ್ತದೆ. ಸಿಗೋಣ ಮುಂದಿನ ಉಪಯುಕ್ತ ಮಾಹಿತಿಯಲ್ಲಿ ಧನ್ಯವಾದಗಳು