Adhar Card Update: ಆಧಾರ್ ಕಾರ್ಡ್ ಅಪ್ಡೇಟ್ ಗೆ ಡೆಡ್ ಲೈನ್! ಬೇಗ ಅಪ್ಡೇಟ್ ಮಾಡಿಸಿಕೊಳ್ಳಿ!

Adhar Card document upload: ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡಿ

ನಮಸ್ಕಾರ ಸ್ನೇಹಿತರೆ ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಪೋಸ್ಟ್ ಗೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಗೆಳೆಯರೇ ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವವೇನೆಂದರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಮಾರ್ಚ್ 15 ಕೊನೆ ದಿನಾಂಕವಾಗಿದೆ ಆದಕಾರಣ ಇನ್ನುವರೆಗೆ ಯಾರು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಮಾಡಿಸಿಲ್ಲ ಬೇಗನೆ ಮಾಡಿಸಿ ಇಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗುವ ಸಾಧ್ಯತೆ ಇರುತ್ತದೆ

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ನಾವು ದಿನನಿತ್ಯ ಇದೇ ತರದ ಹೊಸ ಹೊಸ ವಿಚಾರಗಳು ಹೊಸ ಸುದ್ದಿಗಳು ಸರಕಾರದ ಹೊಸ ಯೋಜನೆಗಳು ಹಾಗೂ ಆ ಯೋಜನೆಗಳನ್ನು ನೀವು ಪಡೆಯುವುದು ಹೇಗೆ ಅರ್ಜಿ ಸಲ್ಲಿಸುವುದು ಹೇಗೆ? ಅಷ್ಟೇ ಅಲ್ಲದೆ ಸರ್ಕಾರ ಬಿಡುಗಡೆ ಮಾಡಿರುವಂತಹ ಕೆಲಸಗಳ ವಿವರ ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಕೆಲಸಗಳ ವಿವರ ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಮಾಹಿತಿಯನ್ನು ನಾವಿಲ್ಲಿ ದಿನನಿತ್ಯ ನಿಮಗೆ ಲೇಖನ ಮೂಲಕ ತಿಳಿಸುವ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ

ಗೆಳೆಯರೇ ಭಾರತದಲ್ಲಿ ವಾಸಿಸಬೇಕಾದರೆ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ ಈ ಆಧಾರ್ ಕಾರ್ಡ್ ಇಲ್ಲದೆ ಹೋದರೆ ನೀವು ಭಾರತದ ನಿವಾಸಿ ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ ನೀವು ಯಾವುದೇ ಸರಕಾರದ ಯೋಜನೆ ಅಥವಾ ಸರಕಾರದ ಸೌಲಭ್ಯಗಳನ್ನು ಪಡೆಯಬೇಕಾದರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇರುವುದು ಮುಖ್ಯವಾಗಿದೆ ಒಂದು ವೇಳೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವಾದರೆ ಸರಕಾರ ಬಿಡುಗಡೆ ಮಾಡುವ ಯಾವುದೇ ಯೋಜನೆ ಸರ್ಕಾರ ಯಾವುದೇ ಸೌಲಭ್ಯ ಮತ್ತು ಸೌಲಭ್ಯಗಳು ನಿಮಗೆ ಸಿಗುವುದಿಲ್ಲ ಆದಕಾರಣ ಆಧಾರ್ ಕಾರ್ಡ್ಗೆ ದಾಖಲೆಗಳನ್ನು ಅಪ್ಲೋಡ್ ಮಾಡಿ

ಗೆಳೆಯರೇ ಕೇಂದ್ರ ಸರ್ಕಾರವು ಇದೀಗ ಹೊಸ ನಿಯಮಾವಳಿಗಳನ್ನು ಜಾರಿ ಮಾಡಿದೆ ಹತ್ತು ವರ್ಷ ಮುಗಿದ ಅಂತಹ ಆಧಾರ್ ಕಾರ್ಡ್ಗಳಿಗೆ ದಾಖಲೆಗಳ ಅಪ್ಲೋಡ್ ಕಡ್ಡಾಯವಾಗಿದೆ ಒಂದು ವೇಳೆ ನೀವು ದಾಖಲೆಗಳನ್ನು ಅಪ್ಲೋಡ್ ಮಾಡದೇ ಹೋದರೆ ನಿಮ್ಮ ಆಧಾರ್ ಕಾರ್ಡ್ ಬಂದಾಗುವ ಸಾಧ್ಯತೆ ಇರುತ್ತದೆ ಇಲ್ಲವಾದರೆ ಮಾರ್ಚ್ 15 ಮುಗಿದ ಬಳಿಕ ನೀವು ಏನಾದರೂ ಡಾಕ್ಯುಮೆಂಟ್ ಅಪ್ಲೋಡ್ ಮಾಡಿದರೆ ನಿಮಗೆ ರೂ.1000 ದಂಡ ಬಿಡುವುದು ಪಕ್ಕ ಆದಕಾರಣ ಈ ಆಧಾರ್ ಕಾರ್ಡಿಗೆ ದಾಖಲೆ ಅಪ್ಲೋಡ್ ಮಾಡುವ ಕೊನೆಯ ದಿನಾಂಕದ ಮೇಲೆ ಅಪ್ಲೋಡ್ ಮಾಡಿ

ಆಧಾರ್ ಕಾರ್ಡ್ ಗೆ ದಾಖಲೆಗಳ ಅಪ್ಲೋಡ್ ಯಾಕೆ?

ಗೆಳೆಯರೇ ಆಧಾರ್ ಕಾರ್ಡ್ ಹೊಂದಿದಂತಹ ವ್ಯಕ್ತಿಯು ಇದೀಗ ಆಧಾರ್ ಕಾರ್ಡ್ ಗೆ ತನ್ನ ಇನ್ನು ಕೆಲವು ದಾಖಲೆಗಳನ್ನು ಅಥವಾ ವಿಳಾಸದ ಪುರಾವೆಗಳನ್ನು ಅಪ್ಲೋಡ್ ಮಾಡಲು ಮಾರ್ಚ್ 15 ರವರೆಗೆ ಕೇಂದ್ರ ಸರ್ಕಾರ ದಿನಾಂಕವನ್ನು ನೀಡಿದೆ ಕೇಂದ್ರ ಸರ್ಕಾರವು ಇದೀಗ ಈ ಯೋಜನೆಯನ್ನು ಏಕೆ ಜಾರಿಗೆ ತಂದಿದೆ ಎಂದರೆ ನಮ್ಮ ಈ ಭಾರತದಲ್ಲಿ ಹಲವಾರು ಜನರು ನಕಲಿ ವಿಳಾಸವನ್ನು ಅಥವಾ ನಕಲಿ ದಾಖಲೆಯನ್ನು ಮಾಡಿಕೊಂಡು ಸರಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಆದಕಾರಣ ಅವರನ್ನು ಹಿಡಿಯಲು ಸರಕಾರ ಇದು ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ

ಆಧಾರ್ ಕಾರ್ಡ್ ಗೆ ಅಪ್ಲೋಡ್ ಮಾಡಲು ಬೇಕಾಗುವ ದಾಖಲೆಗಳು?

  • ಡ್ರೈವಿಂಗ್ ಲೈಸೆನ್ಸ್
  • ವಿಳಾಸದ ಪುರಾವೆ
  • ಪ್ಯಾನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ಜೆರಾಕ್ಸ್
  • ಪಡಿತರ ಚೀಟಿ
  • ಪಡಿತರ ಚೀಟಿಯಲ್ಲಿರುವ ಸದಸ್ಯರ ಗುರುತಿನ ಚೀಟಿ
  • ಮೊಬೈಲ್ ಸಂಖ್ಯೆ
  • ಒಂದು ವೇಳೆ ವಿದ್ಯಾರ್ಥಿಯು ವಿದ್ಯಾಭ್ಯಾಸ ಮಾಡುತ್ತಿದ್ದರೆ ಶಾಲಾ ದೃಢೀಕರಣ

ಈ ಮೇಲಿನ ಎಲ್ಲಾ ದಾಖಲೆಗಳಲ್ಲಿ ಯಾವುದಾದರೂ ಎರಡು

ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಹೇಗೆ?

ಆಧಾರ್ ಕಾರ್ಡಿಗೆ ದಾಖಲೆಗಳನ್ನು ಅಪ್ಲೋಡ್ ಮಾಡಲು ಎರಡು ಹಂತಗಳಿವೆ ಅವುಗಳೆಂದರೆ

ಹಂತ-1 ನೀವು ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು ಅದು ಹೇಗೆಂದರೆ ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಆಗಿರುವ ಮೊಬೈಲ್ ನಂಬರ್ ಅನ್ನು ಹಾಕಿ ಒಟಿಪಿ ಬರುವರೆಗೂ ಕಾಯ್ದು ಓಟಿಪಿಯನ್ನು ಅಲ್ಲಿ ಹಾಕಿ ಲಾಗಿನ್ ಆಗಿ ನಂತರ ಡಾಕುಮೆಂಟ್ ಅಪ್ಲೋಡ್ ಅಂತ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವ ಎಲ್ಲ ವಿವರಗಳನ್ನು ಸರಿಯಾಗಿ ಬರ್ತಿ ಮಾಡಿ ನೀವು ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡಬಹುದು

ಹಂತ-2 ನಿಮ್ಮ ಮೊಬೈಲ್ ಮೂಲಕ ನೀವು ಡಾಕ್ಯುಮೆಂಟ್ ಅಪ್ಲೋಡ್ ಮಾಡುವುದು ಕಷ್ಟವಾದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಅಲ್ಲಿ ಕೇಳುವ ಎಲ್ಲ ದಾಖಲೆಗಳನ್ನು ನೀಡಿ ನೀವು ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ಅಪ್ಲೋಡ್ ಮಾಡಬಹುದಾಗಿದೆ

ಆದಾರ್ ಕಾರ್ಡ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ನಾವು ಕೆಳಗೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ        

     https://myaadhaar.uidai.gov.in

ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಗೆ ದಾಖಲೆಗಳನ್ನು ನಿಮ್ಮ ಮೊಬೈಲ್ ಮೂಲಕವೇ ಅಪ್ಲೋಡ್ ಮಾಡಿಕೊಳ್ಳಬಹುದಾಗಿದೆ

ಇದನ್ನು ಸಹ ಓದಿ

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯದ ತರದ ಹೊಸ ಸುದ್ದಿ ವಾಸ ವಿಚಾರಗಳು ಸರ್ಕಾರ ಬಿಡುಗಡೆ ಮಾಡುವ ಹೊಸ ಹೊಸ ಯೋಜನೆಗಳ ವಿವರ ಮತ್ತು ಆ ವೇದನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಆ ಯೋಜನೆಗಳನ್ನು ಲಾಭ ನೀವು ಹೇಗೆ ಪಡೆಯಬಹುದು ಅಷ್ಟೇ ಅಲ್ಲದೆ ಸರ್ಕಾರ ಬಿಡುಗಡೆ ಮಾಡುವ ಹೊಸ ಹುದ್ದೆಗಳ ವಿವರ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಖಾಸಗಿ ಕಂಪನಿಯಲ್ಲಿ ಖಾಲಿ ಇರುವಂತಹ ಹುದ್ದೆಗಳ ವಿವರ ಹಾಗೂ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ನಾವಿಲ್ಲಿ ಮಾಹಿತಿಯನ್ನು ಲೇಖನ ಮೂಲಕ ನಿಮಗೆ ತಿಳಿಸಲು ಇರುತ್ತೇವೆ